"ಅಮಿತ್ ಶಾ ಪುತ್ರ ಬಿಸಿಸಿಐ ಪ್ರವೇಶಿಸಿದ್ದು ಹೇಗೆ?": ಪ್ರಧಾನಿ ಮೋದಿಗೆ ಅಖಿಲೇಶ್ ಯಾದವ್ ಪ್ರಶ್ನೆ

Update: 2022-03-04 09:36 GMT

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣಗಳಲ್ಲಿ ವಿಪಕ್ಷಗಳನ್ನು ಗುರಿಯಾಗಿಸಿ ಅವುಗಳ ಅನೇಕ ನಾಯಕರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆಂದು ಟೀಕಿಸುವುದು ಬಹಳ ಸಾಮಾನ್ಯವಾಗಿ ಬಿಟ್ಟಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನೂ ಪ್ರಧಾನಿ ಇದೇ ವಿಚಾರ ಮುಂದಿಟ್ಟುಕೊಂಡು ಹಲವು ಬಾರಿ ಟೀಕಿಸಿದ್ದಾರೆ.

ಇದಕ್ಕೆ ಅಖಿಲೇಶ್ ತಕ್ಕ ಪ್ರತ್ಯುತ್ತರವನ್ನು ನೀಡಿದ್ದಾರೆ. "ಅವರ ಸರಕಾರದ ಎರಡನೇ ಅತಿ ಮುಖ್ಯ ವ್ಯಕ್ತಿಯ ಪುತ್ರ ಕ್ರಿಕೆಟ್ ಕ್ಷೇತ್ರವನ್ನು ಪ್ರವೇಶಿಸಿದ್ದು ಹೇಗೆ? ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾವ ಗೋರಖಪುರ ಮಠದಲ್ಲಿರದೇ ಇದ್ದಿದ್ದರೆ ಪ್ರಾಯಶಃ ನಮ್ಮ ಸಿಎಂ ಕೂಡ ಮಠದ ಮುಖ್ಯಸ್ಥರಾಗಿರುತ್ತಿರಲಿಲ್ಲ" ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ, ಬಿಸಿಸಿಐ ಗೌರವ ಕಾರ್ಯದರ್ಶಿಯಾಗಿರುವ ಜಯ್ ಶಾ ಹಾಗೂ ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

"ಪ್ರಧಾನಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವಾಗ ಅವರ ಪಕ್ಕದಲ್ಲಿಯೇ ನಿಂತಿದ್ದ ಮಾಜಿ ಸಂಸದರನ್ನು ನೋಡಲಿಲ್ಲವೇ? ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮರೆತುಬಿಟ್ಟರೇ? ಅವರ ಇಬ್ಬರು ಸಂಬಂಧಿಕರು ಮತ್ತು ಅತ್ತೆಯಂದಿರು ಬಿಜೆಪಿಯಲ್ಲಿದ್ದಾರೆ. ಅವರು ಯಾರ ಪುತ್ರ? ಕರ್ನಾಟಕದ ಮುಖ್ಯಮಂತ್ರಿ ಯಾರ ಪುತ್ರ? ಅವರಿಗೆ (ಪ್ರಧಾನಿಗೆ) ಕುಟುಂಬವಿಲ್ಲವೆಂದು ನಾನೇನು ಮಾಡಲಿ?" ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News