×
Ad

ಪೇಶಾವರದ ಮಸೀದಿಯಲ್ಲಿ ಭಾರೀ ಸ್ಫೋಟ: 30 ಮಂದಿ ಬಲಿ, 56 ಜನರಿಗೆ ಗಾಯ

Update: 2022-03-04 16:01 IST
ಸಾಂದರ್ಭಿಕ ಚಿತ್ರ 

ಪೇಶಾವರ: ವಾಯುವ್ಯ ಪಾಕಿಸ್ತಾನದ ಪೇಶಾವರ ನಗರದ ಶಿಯಾ ಮಸೀದಿಯೊಂದರಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಹಾಗೂ 56 ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ರಾಜಧಾನಿ ಇಸ್ಲಾಮಾಬಾದ್‌ನ ಪಶ್ಚಿಮಕ್ಕೆ ಸುಮಾರು 190 ಕಿಲೋಮೀಟರ್ (120 ಮೈಲಿ) ದೂರದಲ್ಲಿರುವ ಪೇಶಾವರದ ಕೊಚಾ ರಿಸಾಲ್ದಾರ್ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆಗೆ ಕೆಲವೇ ಕ್ಷಣಗಳ ಮೊದಲು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

"ಮಸೀದಿಯನ್ನು ಪ್ರವೇಶಿಸುವ ಮೊದಲು ಒಬ್ಬ ವ್ಯಕ್ತಿ ಇಬ್ಬರು ಪೊಲೀಸರ ಮೇಲೆ ಗುಂಡು ಹಾರಿಸುವುದನ್ನು ನಾನು ನೋಡಿದೆ. ಸೆಕೆಂಡುಗಳ ನಂತರ ನಾನು ದೊಡ್ಡ ಸ್ಫೋಟವನ್ನು ಕೇಳಿದೆ" ಎಂದು ಝಾಹಿದ್ ಖಾನ್ ಹೇಳಿದರು.

ಪಾಕಿಸ್ತಾನ ಹಾಗೂ  ಆಸ್ಟ್ರೇಲಿಯಾ ನಡುವೆ ರಾವಲ್ಪಿಂಡಿಯಲ್ಲಿ ಕ್ರಿಕೆಟ್ ಟೆಸ್ಟ್ ಪಂದ್ಯಆರಂಭವಾದ ದಿನವೇ  ಈ ಘಟನೆ ನಡೆದಿದೆ. ಆಸ್ಟ್ರೇಲಿಯ ಕ್ರಿಕೆಟಿಗರು  ಭದ್ರತಾ ಕಳವಳದ ಕಾರಣದಿಂದ ಸುಮಾರು 25 ವರ್ಷಗಳಿಂದ ಪಾಕ್ ಗೆ ಪ್ರವಾಸ ಮಾಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News