ಉಡುಪಿಯಲ್ಲಿ ವಿಶ್ವ ಶ್ರವಣ ದಿನಾಚರಣೆ
ಉಡುಪಿ, ಮಾ.4: ಜಿಲ್ಲಾ ಆಸ್ಪತ್ರೆ ಉಡುಪಿ, ನ್ಯೂಸಿಟಿ ನರ್ಸಿಂಗ್ ಕಾಲೇಜು ಮತ್ತು ಐಎಂಎ ಸಂಘ ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಐಎಂಎ ಭವನದಲ್ಲಿ ವಿಶ್ವ ಶ್ರವಣ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ವಿಶ್ವ ಶ್ರವಣ ದಿನಾಚರಣೆ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್‌ಪಿಪಿಸಿಡಿ ನೋಡೆಲ್ ಅಧಿಕಾರಿ ಡಾ. ಶ್ರೀರಾಮರಾವ್, ಡಾ. ವಿನಾಯಕ ಶೆಣೈ, ಆಡಿಯಾಲಜಿಸ್ಟ್ ದಿಶಾ ಪಿ. ಕಾರ್ನಾಡ್ ಹಾಗೂ ನ್ಯೂಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾಥಿಗರ್ಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್‌ಪಿಪಿಸಿಡಿ ನೋಡೆಲ್ ಅಧಿಕಾರಿ ಡಾ. ಶ್ರೀರಾಮರಾವ್, ಡಾ. ವಿನಾಯಕ ಶೆಣೈ, ಆಡಿಯಾಲಜಿಸ್ಟ್ ದಿಶಾ ಪಿ. ಕಾರ್ನಾಡ್ ಹಾಗೂ ನ್ಯೂಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ (ಪ್ರಭಾರ) ಚಂದ್ರಕಲಾ ಸ್ವಾಗತಿಸಿ, ವಂದಿಸಿದರು. ಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.