ಶೇನ್ ವಾರ್ನ್ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಿದ ಭಾರತ, ಶ್ರೀಲಂಕಾ ಕ್ರಿಕೆಟಿಗರು

Update: 2022-03-05 05:56 GMT

ಮೊಹಾಲಿ: ಶುಕ್ರವಾರ ನಿಧನರಾದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಶೇನ್ ವಾರ್ನ್ ಹಾಗೂ  ರಾಡ್ ಮಾರ್ಷ್ ಅವರ ಸ್ಮರಣಾರ್ಥ ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ನ 2 ನೇ ದಿನದಂದು ಭಾರತ ಹಾಗೂ ಶ್ರೀಲಂಕಾ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.

"ನಿನ್ನೆ ನಿಧನರಾದ ರಾಡ್ನಿ ಮಾರ್ಷ್ ಮತ್ತು ಶೇನ್ ವಾರ್ನ್ ಅವರಿಗೆ ಮೊದಲ ಟೆಸ್ಟ್‌ನ 2 ನೇ ದಿನದಂದು ಆಟ ಆರಂಭವಾಗುವ ಮೊದಲು ಒಂದು ನಿಮಿಷ ಮೌನ ಪ್ರಾರ್ಥನೆ ಆಚರಿಸಲಾಯಿತು. ಭಾರತೀಯ ಕ್ರಿಕೆಟ್ ತಂಡವು ಇಂದು ಕಪ್ಪು ಪಟ್ಟಿಯನ್ನು ಧರಿಸಲಿದೆ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಶುಕ್ರವಾರದಂದು ವಾರ್ನ್ ಅವರ ಹಠಾತ್ ಸಾವು ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳನ್ನು ದುಃಖದ ಕಡಲಲ್ಲಿ ತೇಲಿಸಿತು.

ವಾರ್ನ್ ಅವರು 1992 ರಲ್ಲಿ ಸಿಡ್ನಿಯಲ್ಲಿ ಭಾರತದ ವಿರುದ್ಧವೇ   ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು.  ಒಟ್ಟು 708 ವಿಕೆಟ್ ಗಳನ್ನು ಕಬಳಿಸಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಬಳಿಕ  ವಿಶ್ವದ ಎರಡನೇ ಸಾರ್ವಜನಿಕ ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News