×
Ad

ರಷ್ಯಾ ಬ್ಯಾಂಕುಗಳ ಮೇಲೆ ನಿರ್ಬಂಧ ಜಾರಿಗೊಳಿಸಿದ ಸಿಂಗಾಪುರ

Update: 2022-03-06 00:08 IST

ಸಿಂಗಾಪುರ: ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವುದಕ್ಕೆ ಪ್ರತಿಯಾಗಿ ರಷ್ಯನ್ ಸೆಂಟ್ರಲ್ ಬ್ಯಾಂಕ್ ಹಾಗೂ ರಷ್ಯಾದ ಇತರ ಬ್ಯಾಂಕ್‌ಗಳ ಮೇಲೆ ನಿರ್ಬಂಧ ವಿಧಿಸಿರುವುದಾಗಿ ಸಿಂಗಾಪುರದ ವಿದೇಶ ವ್ಯವಹಾರ ಇಲಾಖೆ ಶನಿವಾರ ಘೋಷಿಸಿದೆ.
ರಷ್ಯಾ ಸರಕಾರ, ರಷ್ಯಾ ಸೆಂಟ್ರಲ್ ಬ್ಯಾಂಕ್, ಅಥವಾ ಇವರಿಂದ ನಿಯಂತ್ರಿಸಲ್ಪಡುವ ಅಥವಾ ಇವರ ಆದೇಶದಂತೆ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸುವ ಅಥವಾ ಆರ್ಥಿಕ ಸೇವೆ ಒದಗಿಸುವ, ಬಂಡವಾಳ ಸಂಗ್ರಹಿಸಲು ನೆರವಾಗುವ ಆರ್ಥಿಕ ವ್ಯವಹಾರದಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. 
ಶೇರು, ಸೆಕ್ಯುರಿಟೀಸ್ ವ್ಯವಹಾರ, ಆರ್ಥಿಕ ಬಂಡವಾಳ ಸಂಗ್ರಹಿಸುವ ವ್ಯವಹಾರ ಮತ್ತು ಸಾಲಕ್ಕೆ ಸಂಬಂಧಿಸಿದ ವ್ಯವಹಾರಕ್ಕೆ ಈ ನಿಷೇಧ ಅನ್ವಯಿಸುತ್ತದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ರಷ್ಯನ್ ಸೆಂಟ್ರಲ್ ಬ್ಯಾಂಕ್ ಅಲ್ಲದೆ, ವಿಟಿಬಿ, ವೆನೆಶ್ಕೊನೊಮ್ ಬ್ಯಾಂಕ್, ಪ್ರೊಮ್ಸುವ್ಯಾಜ್ ಬ್ಯಾಂಕ್ ಮತ್ತು ಬ್ಯಾಂಕ್ ರೊಸಿಯಾಕ್ಕೆ ಈ ನಿರ್ಬಂಧ ಅನ್ವಯಿಸುತ್ತದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News