×
Ad

ಐಸಿಸಿ ಮಹಿಳಾ ವಿಶ್ವಕಪ್:‌ ಪಾಕಿಸ್ತಾನವನ್ನು 107 ರನ್‌ಗಳಿಂದ ಮಣಿಸಿದ ಭಾರತ ತಂಡ

Update: 2022-03-06 14:45 IST
photo: Twitter

ಬೇ ಓವಲ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ನ ನಾಲ್ಕನೇ ಪಂದ್ಯಾಟದಲ್ಲಿ‌ ಇಲ್ಲಿನ ಮೌಂಟ್‌ ಮೌಂಗಾನಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಾಟದಲ್ಲಿ ಭಾರತ ತಂಡ 107 ರನ್‌ಗಳ ಭರ್ಜರಿ ಜಯ ಗಳಿಸಿದೆ. 50 ಓವರ್‌ ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಭಾರತ 244 ರನ್‌ ಪೇರಿಸಿದ್ದರೆ ಪಾಕಿಸ್ತಾನ ತಂಡವು 43 ಓವರ್‌ ಗಳಲ್ಲಿ 137 ರನ್‌ ಗಳಿಗೆ ಆಲೌಟ್‌ ಆಯಿತು.

ಭಾರತದ ಪರ ಸ್ಮೃತಿ ಮಂಧಾನ 52  ರನ್‌, ದೀಪ್ತಿ ಶರ್ಮಾ 40 ರನ್‌, ಸ್ನೇಹ್‌ ರಾಣಾ 53 ಹಾಗೂ ಪೂಜಾ ವಸ್ತ್ರಕರ್‌ 67 ರನ್‌ ದಾಖಲಿಸಿದರು. ಪಾಕಿಸ್ತಾನದ ಪರ ಸಿದ್ರಾ ಅಮೀನ್‌ ಗಳಿಸಿದ 30 ರನ್‌ ಅತಿಹೆಚ್ಚಿನ ರನ್‌ ಆಗಿ ಮೂಡಿಬಂತು. ಬೌಲಿಂಗ್‌ ವಿಭಾದಲ್ಲಿ ರಾಜೇಶ್ವರಿ ಗಾಯಕ್‌ವಾಡ್‌ 4 ವಿಕೆಟ್‌ ಗಳನ್ನು ಪಡೆದು ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News