ಮೊದಲ ಟೆಸ್ಟ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2022-03-06 11:40 GMT

ಮೊಹಾಲಿ,ಮಾ.6: ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತವು ಶ್ರೀಲಂಕಾ ತಂಡವನ್ನು ಇನಿಂಗ್ಸ್ ಹಾಗೂ 222 ರನ್ ಗಳ ಅಂತರದಿಂದ ಹೀನಾಯವಾಗಿ ಸೋಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತದ ಮೊದಲ ಇನಿಂಗ್ಸ್ ಮೊತ್ತ 574 ರನ್ ಗೆ ಉತ್ತರವಾಗಿ ಶ್ರೀಲಂಕಾ ಮೂರನೇ ದಿನವಾದ ರವಿವಾರ ಮೊದಲ ಇನಿಂಗ್ಸ್ ನಲ್ಲಿ ಕೇವಲ 174 ರನ್ ಗಳಿಸಿ ಫಾಲೋ ಆನ್ ಗೆ ಸಿಲುಕಿತು. ತನ್ನ ಎರಡನೇ ಇನಿಂಗ್ಸ್ ನಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡ ಶ್ರೀಲಂಕಾ ಕೇವಲ 178 ರನ್ ಗಳಿಸಿ ಇನಿಂಗ್ಸ್ ಅಂತರದ ಸೋಲು ಕಂಡಿತು.

ಭರ್ಜರಿ ಶತಕ ಸಿಡಿಸಿದ್ದಲ್ಲದೆ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗೊಂಚಲು ಸಹಿತ ಒಟ್ಟು 9 ವಿಕೆಟ್ ಗಳನ್ನು ಕಬಳಿಸಿ ಆಲ್ ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಜಡೇಜ ಐತಿಹಾಸಿಕ ಸಾಧನೆ

ಸುಮಾರು 50 ವರ್ಷಗಳ ನಂತರ  ರವೀಂದ್ರ ಜಡೇಜ ಅವರು  ಟೆಸ್ಟ್ ಪಂದ್ಯವೊಂದರಲ್ಲಿ ಇನಿಂಗ್ಸ್‌ನಲ್ಲಿ 150 ಕ್ಕೂ ಹೆಚ್ಚು ರನ್ ಗಳಿಸಿದ ಹಾಗೂ  ಐದು ವಿಕೆಟ್ ಗೊಂಚಲು ಪಡೆದ ಮೊದಲ ಕ್ರಿಕೆಟಿಗರಾದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಭಾರತದ ವಿನೂ ಮಂಕಡ್. ಮಂಕಡ್  ಅವರು 1952 ರಲ್ಲಿ ಇಂಗ್ಲೆಂಡ್ ವಿರುದ್ಧ 184 ರನ್ ಗಳಿಸಿದ್ದರು ಹಾಗೂ 5 ವಿಕೆಟ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News