×
Ad

ಪಡುಬಿದ್ರಿ: ತಾಯಿ ಮಗು ನಾಪತ್ತೆ

Update: 2022-03-06 21:22 IST

ಪಡುಬಿದ್ರಿ, ಮಾ.6: ತಾಯಿ ಮಗು ನಾಪತ್ತೆಯಾಗಿರುವ ಘಟನೆ ಮಾ.4 ರಂದು ಅಪರಾಹ್ನ ವೇಳೆ ಇನ್ನಾ ಗ್ರಾಮದ ಮಡ್ನಣ್ ಎಂಬಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಪಡುಬಿದ್ರಿ ಡೀನ್‌ಸ್ಟ್ರೀಟ್ ನಿವಾಸಿ ಮುಹಮ್ಮದ್ ಇಲಿಯಾಸ್ ಎಂಬವರ ಪತ್ನಿ ಝೀನತ್(22) ಹಾಗೂ ಮಗ ಮುಹಮ್ಮದ್ ಇಲ್ಹಾನ್(2) ಎಂದು ಗುರುತಿಸಲಾಗಿದೆ.

ಮಾ.2ರಂದು ಸಂಜೆ ತಾಯಿ ಮನೆಗೆ ಬಂದಿದ್ದ ಝೀನತ್, ಮಾ.4ರಂದು ಮಗನೊಂದಿಗೆ ಗಂಡನ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News