ಮಲ್ಪೆ: ಬೋಟಿನಿಂದ ನೀರಿಗೆ ಬಿದ್ದು ಮೀನುಗಾರ ಮೃತ್ಯು
Update: 2022-03-06 21:24 IST
ಮಲ್ಪೆ, ಮಾ.6: ಬೋಟಿನಲ್ಲಿ ಮಲಗಿದ್ದ ಮೀನುಗಾರರೊಬ್ಬರು ಆಕಸ್ಮಿಕವಾಗಿ ಮಲ್ಪೆ ಬಂದರಿನ ದಕ್ಕೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ತೆಕ್ಕಟ್ಟೆ ಕೊಮೆ ನಿವಾಸಿ ನಾರಾಯಣ ಮೋಗವೀರ(64) ಎಂದು ಗುರುತಿಸಲಾಗಿದೆ. ಮಾ.2ರಂದು ರಾತ್ರಿ ಬೋಟಿನಲ್ಲಿ ಮಲಗಿದ್ದ ಇವರು ಅಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಮಾ.6 ರಂದು ಬೆಳಗ್ಗೆ ಇವರ ಮೃತದೇಹ ಮಲ್ಪೆಯ ಲೈಟ್ ಹೌಸ್ ಬಳಿ ಕಲ್ಲಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.