×
Ad

ಖಾರ್ಕಿವ್‌ನಲ್ಲಿ ರಾತ್ರಿ ವೇಳೆ ಶೆಲ್ ದಾಳಿ: ಕನಿಷ್ಠ 8 ಮಂದಿ ಮೃತ್ಯು

Update: 2022-03-07 11:55 IST

ಕೀವ್: ಖಾರ್ಕಿವ್‌ ನಗರದಲ್ಲಿ ರಾತ್ರಿ ವೇಳೆ ರಷ್ಯ ನಡೆಸಿರುವ  ಶೆಲ್ ದಾಳಿಯ ನಂತರ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ  ಎಂದು ಮಾಧ್ಯಮ ಸಂಸ್ಥೆ NEXTA  ವರದಿ ಮಾಡಿದೆ.

ರಾತ್ರಿಯ ದಾಳಿಯ  ನಂತರ ಉಕ್ರೇನ್‌ನ ಮೈಕೊಲೈವ್‌ನಲ್ಲಿರುವ  ವಸತಿ ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ.

ಮಾರ್ಚ್ 7 ರಂದು ರಷ್ಯಾದ ಫಿರಂಗಿಗಳು ದಕ್ಷಿಣ ಉಕ್ರೇನಿಯನ್ ನಗರವಾದ ಮೈಕೊಲೈವ್ ಮೇಲೆ  ರಾತ್ರಿಯಿಡೀ ದಾಳಿ ನಡೆಸಿದ್ದವು. ಇದರ ಪರಿಣಾಮವಾಗಿ ವಸತಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News