ಉಕ್ರೇನ್‍ನಿಂದ ಕಳೆದ ಶನಿವಾರ ವಾಪಸಾಗಿ ಇಂದು ವಾರಣಾಸಿಯಲ್ಲಿ ಮತ ಚಲಾಯಿಸಿದ ವಿದ್ಯಾರ್ಥಿನಿ
Update: 2022-03-07 18:08 IST
ವಾರಣಾಸಿ: ಯುದ್ಧಪೀಡಿತ ಉಕ್ರೇನ್‍ನಿಂದ ಶನಿವಾರವಷ್ಟೇ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ವೈದ್ಯಕೀಯ ವಿದ್ಯಾರ್ಥಿನಿ ಕೃತ್ತಿಕಾ ಇಂದು ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಚುನಾವಣೆಯಲ್ಲಿ ವಾರಣಾಸಿಯ ಮತಗಟ್ಟೆಯೊಂದರಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.
ಯುದ್ಧಪೀಡಿತ ಉಕ್ರೇನ್‍ನಲ್ಲಿ ತಾವು ಅನುಭವಿಸಿದ ಮಾನಸಿಕ ಕ್ಷೋಭೆಯಿಂದ ಇನ್ನಷ್ಟೇ ಹೊರಬರಬೇಕಿದ್ದರೂ ಮತದಾನದ ಹಕ್ಕನ್ನು ಚಲಾಯಿಸುವ ಕರ್ತವ್ಯವನ್ನು ಇಂದು ನಿಭಾಯಿಸಿದ್ದಾಗಿ ಅವರು ಹೇಳಿದ್ದಾರೆ.
ಉಕ್ರೇನ್‍ನ ಖಾರ್ಕೀವ್ ನಗರದಿಂದ ಪೋಲಂಡ್ ಗಡಿಗೆ ತಾವು ಮತ್ತು ಇತರ ಸ್ನೇಹಿತರು ತಾವಾಗಿಯೇ ತಲುಪಿದ್ದು ಗಡಿ ತಲುಪಿದ ನಂತರವಷ್ಟೇ ಭಾರತೀಯ ದೂತಾವಾಸ ಅಧಿಕಾರಿಗಳಿಂದ ಸಹಾಯ ದೊರಕಿತ್ತು ಎಂದು ಅವರು ಹೇಳಿದ್ದಾರೆ.
ನಮಗೆ ಇಲ್ಲಿಯೇ ಶಿಕ್ಷಣ ಒದಗಿಸಲು ಪ್ರಧಾನಿ ಅವಕಾಶ ಕಲ್ಪಿಸಿದರೆ ಇಲ್ಲಿಯೇ ಶಿಕ್ಷಣ ಮುಂದುವರಿಸುತ್ತೇನೆ ಇಲ್ಲದೇ ಇದ್ದರೆ ಉಕ್ರೇನ್‍ಗೆ ಮರಳುತ್ತೇನೆ ಎಂದು ಅವರು ಹೇಳುತ್ತಾರೆ.