×
Ad

ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಿಂದ ತರಬೇತಿ ಕಾರ್ಯಾಗಾರ

Update: 2022-03-07 18:20 IST

ಉಡುಪಿ, ಮಾ.7: ಸ್ವ ಉದ್ಯೋಗ, ಉಚಿತ ತರಬೇತಿ ಮತ್ತು ಉದ್ಯೋಗ ಅವಕಾಶವನ್ನು ಸೃಷ್ಟಿಸುವ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ ಇದರ ಮೂರನೆ ಆವೃತ್ತಿಯ ಸ್ಕಿಲ್ ಹಬ್ ಇನಿಟಿಯೇಟಿವ್ ತರಬೇತಿ ಕಾರ್ಯಾಗಾರ ವನ್ನು ಮಣಿಪಾಲದಲ್ಲಿರುವ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಸ್ಕಿಲ್ ಇಂಡಿಯಾದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶಾಲಾ-ಕಾಲೇಜು ವಿದ್ಯಾಭ್ಯಾಸ ಮುಂದು ವರಿಸಲು ಸಾಧ್ಯವಾಗದೆ ಇರುವವರು /ಅರ್ಧದಲ್ಲೇ ಶಾಲೆ ಬಿಟ್ಟವರು ಹಾಗೂ ಉದ್ಯೋಗ ಅವಕಾಶದಿಂದ ವಂಚಿತ ರಾಗಿರುವವರಿಗೆ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ರೋಮನ್ ಸೆಂಟರ್‌ನ ಮುಖ್ಯಸ್ಥ ರಾಘವೇಂದ್ರ ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

15 ವರ್ಷದಿಂದ 45 ವರ್ಷದ ವರೆಗಿನ ಯುವಕ, ಯುವತಿಯರು, ಮಹಿಳೆ ಹಾಗೂ ಪುರುಷರಿಗಾಗಿ ಕೇಂದ್ರ ಸರಕಾರ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತರಿಗೆ ಮಾ.15ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದು ಬ್ಯಾಚ್‌ನಲ್ಲಿ 30 ರಿಂದ 40 ಮಂದಿಗೆ ಅವಕಾಶ ನೀಡಲಾಗುತ್ತದೆ. ಬೆಳಗ್ಗೆ 9 ಗಂಟೆಯಿಅದ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಅದ ಸಂಜೆ 6 ಗಂಟೆ ತನಕ ತರಬೇತಿ ನೀಡಲಾಗುತ್ತದೆ ಎಂದು ರಾಘವೇಂದ್ರ ರಾವ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News