×
Ad

ಉಕ್ರೇನ್‌ನ ಸುಮಿಯಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳಲ್ಲಿ ಕಮರುತ್ತಿರುವ ಭರವಸೆಯ ಕಿರಣ: ರಕ್ಷಣೆಗೆ ಮನವಿ

Update: 2022-03-07 22:41 IST

ಹೊಸದಿಲ್ಲಿ, ಮಾ. 7: ‘‘ನಾವು ಕಳೆದ 10 ದಿನಗಳಿಂದ ಇಲ್ಲಿ ಕಾಯುತ್ತಿದ್ದೇವೆ. ಆದರೆ, ನಮ್ಮನ್ನು ಯಾವಾಗ ತೆರವುಗೊಳಿಸಲಾಗುತ್ತದೆ ಎಂಬ ಬಗ್ಗೆ ಭರವಸೆಯ ಕಿರಣ ಕಾಣುತ್ತಿಲ್ಲ’’ ಎಂದು ಈಶಾನ್ಯ ಉಕ್ರೇನ್‌ನ ನಗರ ಸುಮಿಯಲ್ಲಿ ಸಿಲುಕಿಕೊಂಡಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿನಿ ವೀಡಿಯೊ ಸಂದೇಶವೊಂದರಲ್ಲಿ ಹೇಳಿದ್ದಾರೆ. 

ವಿದ್ಯುತ್ ಇಲ್ಲ. ನೀರು ಪೂರೈಕೆ ಇಲ್ಲ. ಎಟಿಂನಲ್ಲಿ ನಗದು ಖಾಲಿಯಾಗಿದೆ. ಅಂಗಡಿಗಳು ಕಾರ್ಡ್ಗಳನ್ನು ಸ್ವೀಕರಿಸುತ್ತಿಲ್ಲ ಎಂದು ಸುಮಿ ಸರಕಾರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಹೇಳಿದ್ದಾರೆ. ‘‘ನಮಗೆ ಆಹಾರ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಕೂಡ ಖರೀದಿಸಲು ಸಾಧ್ಯವಾಗುತ್ತಿಲ್ಲ’’ ಎಂದು ಅವರು ತಿಳಿಸಿದ್ದಾರೆ. 

ಕಳೆದ ಕೆಲವು ದಿನಗಳಿಂದ ರಶ್ಯ ಹಾಗೂ ಉಕ್ರೇನ್ ಸೇನಾ ಪಡೆಗಳ ನಡುವೆ ತೀವ್ರ ಕಾಳಗಕ್ಕೆ ಸಾಕ್ಷಿಯಾಗಿರುವ ಸುಮಿಯಲ್ಲಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಇಲ್ಲಿರುವ ತನ್ನ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ಭಾರತ ಶ್ರಮ ವಹಿಸುತ್ತಿದೆ. ಆದರೆ, ಭಾರೀ ಶೆಲ್ ಹಾಗೂ ವಾಯು ದಾಳಿಯ ಕಾರಣದಿಂದ ಅಲ್ಪ ಮಟ್ಟದ ಯಶಸ್ಸು ಮಾತ್ರ ದೊರಕಿದೆ. ‘‘ನಮ್ಮ ಆತ್ಮಸ್ಥೈರ್ಯ ಕುಗ್ಗುತ್ತಿದೆ. ನಾವು ನಿರುತ್ಸಾಹಗೊಂಡಿದ್ದೇವೆ. ನಾವು ನೆರವಿಗಾಗಿ ಕಾಯುತ್ತಿದ್ದೇವೆ’’ ಎಂದು ಸುಮಿಯಲ್ಲಿ ಸಿಲುಕಿಕೊಂಡಿರುವ ಇನ್ನೋರ್ವ ಭಾರತೀಯ ವಿದ್ಯಾರ್ಥಿ ಆಶಿಕ್ ಹುಸೈನ್ ಸರ್ಕಾರ್ ಹೇಳಿದ್ದಾರೆ. ನಾವು ಕಾಲ್ನಡಿಗೆಯಲ್ಲಿ ತೆರಳಲು ಬಹುತೇಕ ಸಿದ್ಧರಾಗಿದ್ದೇವೆ ಎಂದು ನಾಲ್ಕನೇ ವರ್ಷದ ವೈದ್ಯಕೀಯ ವಿದಾ್ಯರ್ಥಿ ಅಜಿತ್ ಗಂಗಾಧರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News