ಸ್ಮಾರ್ಟ್‌ ಫೋನ್‌ ಇಲ್ಲದ ಬಳಕೆದಾರರಿಗೆ ಹೊಸ "UPI 123PAY" ಬಿಡುಗಡೆಗೊಳಿಸಿದ ಆರ್‌ಬಿಐ

Update: 2022-03-08 12:42 GMT

  ಹೊಸದಿಲ್ಲಿ:  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಂಠ ದಾಸ್ ಅವರು ಮಂಗಳಾರ ಹೊಸ ಇನ್‍ಸ್ಟೆಂಟ್ ಪಾವತಿ ವ್ಯವಸ್ಥೆ "UPI 123 PAY" ಅನ್ನು ಫೀಚರ್ ಫೋನ್ (ಸ್ಮಾರ್ಟ್‌ ಫೋನ್‌ ಅಲ್ಲದ ಸಾಮಾನ್ಯ ಫೋನ್) ಬಳಕೆದಾರರಿಗಾಗಿ ಬಿಡುಗಡೆಗೊಳಿಸಿದ್ದಾರೆ. ಈ ಹೊಸ ಯುಪಿಐ ಭಾರತದ ಸುಮಾರು 40 ಕೋಟಿ ಫೀಚರ್ ಫೋನ್ ಬಳಕೆದಾರರಿಗೆ ಸುರಕ್ಷಿತ ರೀತಿಯಲ್ಲಿ ಪಾವತಿ ಮಾಡಲು ಅನುಕೂಲ ಕಲ್ಪಿಸಲಿದೆ.

ಪ್ರಸ್ತುತ ಯುಪಿಐ ಸೇವೆಗಳು ಬಳಕೆದಾರರಿಗೆ ಯುಎಸ್‍ಎಸ್‍ಡಿ ಆಧರಿತ ಸೇವೆಗಳ ಮುಖಾಂತರ ಲಭ್ಯವಿದೆ. ಈಗ ಹೊಸ ಯುಪಿಐ ಪಾವತಿ ವ್ಯವಸ್ಥೆಯೊಂದಿಗೆ ಫೀಚರ್ ಫೋನ್ ಬಳಕೆದಾರರು ಐವಿಆರ್ ಸಂಖ್ಯೆಗೆ ಕರೆ ಆಧರಿತ, ಆ್ಯಪ್ ಕಾರ್ಯಾತ್ಮಕತತೆ ಆಧರಿತ, ಮಿಸ್ಡ್ ಕರೆ  ಆಧರಿತ ಹಾಗೂ ಧ್ವನಿ-ಆಧರಿತ ಪಾವತಿಗಳಿಗೆ ಅನುಕೂಲ ಕಲ್ಪಿಸಲಿದೆ.

ಹೊಸ ಯುಪಿಐ ವ್ಯವಸ್ಥೆ ಬಳಸಿ ಬಳಕೆದಾರರು ಸ್ನೇಹಿತರು ಮತ್ತು ಕುಟುಂಬ ವರ್ಗಗಳಿಗೆ ಪಾವತಿ ಮಾಡಬಹುದು, ಬಿಲ್ ಪಾವತಿಸಬಹುದು, ತಮ್ಮ ವಾಹನಗಳ ಫ್ಯಾಸ್ಟ್ಯಾಗ್ ರಿಚಾರ್ಜ್ ಮಾಡಬಹುದು, ಮೊಬೈಲ್ ಬಿಲ್ ಪಾವತಿಸಬಹುದು ಮತ್ತು ಬಳಕೆದಾರರು ತಮ್ಮ ಖಾತೆಗಳ ಬ್ಯಾಲೆನ್ಸ್ ಪರಿಶೀಲಿಸಬಹುದು ಎಂದು ಆರ್‌ಬಿಐ ಹೇಳಿದೆ.

 ಗ್ರಾಹಕರು ಬ್ಯಾಂಕ್ ಖಾತೆಗಳನ್ನು ಸಹ ಲಿಂಕ್ ಮಾಡಬಹುದು, ಯುಪಿಐ ಪಿನ್‍ಗಳನ್ನು ಹೊಂದಿಸಬಹುದು ಅಥವಾ ಬದಲಾಯಿಸಬಹುದಾಗಿದೆ ಎಂದು ಆರ್‍ಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News