×
Ad

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನ

Update: 2022-03-08 21:04 IST

ಉಡುಪಿ, ಮಾ.8: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕ ಮಹಿಳೆ ಯರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಉಡುಪಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಮಹಿಳಾ ದಿನಾಚರಣೆ ಎಂಬುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು. ಮಹಿಳೆಯರಿಗೆ ಸಿಗಬೇಕಾದ ಸಮಾನ ಗೌರವ, ಪ್ರತಿದಿನವೂ ಸಿಗುವಂತಾಗಬೇಕು. ಅವರ ಬಗ್ಗೆ ಕೀಳರಿಮೆ ಮನೋಭಾವ ದೂರ ಮಾಡಬೇಕು. ಆ ರೀತಿಯ ಹೃದಯ ಶ್ರೀಮಂತಿಕೆ ಎಲ್ಲರಲ್ಲೂ ಮೂಡಿಬರ ಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ತಹಶೀಲಾರ್ ಫ್ಲೈಟ್ ಲೆಫ್ಟಿನೆಂಟ್ ಅರ್ಚನಾ ಭಟ್, ಉದ್ಯಮಿ ಮೊಹಮ್ಮದ್ ಮೌಲ, ಸಮಾಜ ಸೇವಕ ಅರಲ್ ಜಾನ್ ಡಿಸೋಜ ಮಾತನಾಡಿದರು. ಮಲಬಾರ್ ಗೋಲ್ಡ್‌ನ ‘ಹೋಮ್ ಫಾರ್ ಹೋಮ್ ಲೆಸ್’ ಯೋಜನೆಯಡಿ ಆರು ಫಲಾನುಭವಿ ಗಳಿಗೆ ಒಟ್ಟು ನಾಲ್ಕು ಲಕ್ಷ ರೂ. ಸಹಾಯಧನದ ಚೆಕ್‌ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಗೀತ ಕಲಾವಿದೆ ಕಲಾವತಿ ದಯಾನಂದ, ಪಿಡಿಓ ಫರ್ಜಾನ ಎಂ., ಅರಣ್ಯ ಅಧಿಕಾರಿ ಹಸ್ತ ಶೆಟ್ಟಿ, ತಲ್ಲೂರು ಗ್ರಾಪಂ ಅಧ್ಯಕ್ಷೆ ಭೀಮವ್ವ, ಸಾಮಾಜಿಕ ಕಾರ್ಯಕರ್ತೆ ಸುಮತಿ ನಾಯಕ್ ಸನ್ಮಾನಿಸ ಗೌರವಿಸಲಾಯಿತು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್, ರಾಘವೇಂದ್ರ ನಾಯಕ್, ತಂಝಿಮ್ ಶಿರ್ವ, ಪುರಂದರ ತಿಂಗಳಾಯ ಉಪಸ್ಥಿತರಿದ್ದರು. ಸಂದೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News