×
Ad

ಸಾಧಕ ಮಹಿಳೆಯರಿಗೆ ‘ಸುಲ್ತಾನ್ ನಾರಿ ಶಕ್ತಿ’ ಪ್ರಶಸ್ತಿ ಪ್ರದಾನ

Update: 2022-03-08 21:05 IST

ಉಡುಪಿ, ಮಾ.8: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶಾಖೆ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕ ಮಹಿಳೆಯರಿಗೆ ‘ಸುಲ್ತಾನ್ ನಾರಿ ಶಕ್ತಿ-2022’ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳವಾರ ಉಡುಪಿ ಶಾಖೆಯಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಥೀಮ್ಸ್ ಬ್ಯುಟಿಕ್ಯೂನ ರೇಷ್ಮಾ ಉಡುಪಿಯ ಸ್ತ್ರೀರೋಗ ತಜ್ಞೆಯರಾದ ಡಾ.ಛಾಯಲತಾ, ಡಾ.ದೀಪಾ ರಾವ್ ಮತ್ತು ಉಡುಪಿ ಕೆನರಾ ಬ್ಯಾಂಕಿನ ಡೆಪ್ಯುಟಿ ಜನರಲ್ ಮೆನೇಜರ್ ಲೀನಾ ಪಿಂಟೋ ಅವರಿಗೆ ‘ಸುಲ್ತಾನ್ ನಾರಿ ಶಕ್ತಿ’ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಲೀನಾ ಪಿಂಟೋ, ಹಿಂದೆ ಮಹಿಳೆಯರು ಸಮಾನತೆ, ಮತದಾನ ಸೇರಿದಂತೆ ಹಲವು ಹಕ್ಕುಗಳಿಂದ ವಂಚಿತರಾಗಿದ್ದರು. ಅವುಗಳನ್ನು ನಾವು ಹೋರಾಟದ ಮೂಲಕ ಪಡೆದುಕೊಂಡಿದ್ದೇವೆ. ಓರ್ವ ಮಹಿಳೆ ಶಿಕ್ಷಿತ ಳಾದರೆ ಆಕೆಯ ಇಡೀ ಕುಟುಂಬ ಶಿಕ್ಷಿತವಾಗುತ್ತದೆ. ಅದೇ ರೀತಿ ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಸುಲ್ತಾನ್ ಗೋಲ್ಡ್‌ನ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಸುಲ್ತಾನ್ ಗ್ರೂಪ್‌ನ ಉಡುಪಿ ಫ್ಲೋರ್ ಮೆನೇಜರ್ ಸಿದ್ಧಿಕ್ ಹಸನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅಸಿಸ್ಟೆಂಟ್ ಸೇಲ್ಸ್ ಮೆನೇಜರ್‌ಗಳಾದ ಶಾಮಿಲ್ ಅಬ್ದುಲ್ ಖಾದರ್, ನಝೀರ್ ಅಡ್ಡೂರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News