×
Ad

ಎನ್‌ಡಬ್ಲುಎಫ್‌ನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Update: 2022-03-08 21:25 IST

ಉಡುಪಿ, ಮಾ.8: ನ್ಯಾಷನಲ್ ವಿಮೆನ್ಸ್ ಫ್ರಂಟ್ ಉಡುಪಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸುರಕ್ಷತೆ ಕೇವಲ ಘೋಷಣೆಯಲ್ಲ ಅದು ಘನತೆಯ ಹಕ್ಕು ಎಂಬ ಘೋಷಣೆ ಯೊಂದಿಗೆ ಕಾರ್ಯಕ್ರಮವನ್ನು ಮಂಗಳವಾರ ಉಡುಪಿಯ ಲಯನ್ಸ್ ಭವನ ದಲ್ಲಿ ಆಯೋಜಿಸಲಾಗಿತ್ತು.

ಅಥಿತಿಗಳಾಗಿ ಕೋಟೇಶ್ವರ ಗುರುಕುಲ್ ಪಬ್ಲಿಕ್ ಸ್ಕೂಲ್ನ ಸಂಯೋಜಕಿ ವೈಶಾಲ ಶೆಟ್ಟಿ, ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ಜುಲೈದ ಸುಲ್ತಾನ, ಥೀಮ್ಸ್ ಬಾಟಿಕ್ಯು ಸಂಘಟನೆಯ ಸ್ಥಾಪಕಿ ರೇಷ್ಮಾ ಸೈಯದ್, ಕೆಮ್ಮಣ್ಣು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಿಲ್ವಿಯನ್ ಎ.ಸಿ, ಎನ್‌ಡಬ್ಲುಎಫ್ ರಾಜ್ಯ ಉಪಾಧ್ಯಕ್ಷೆ ಸೈದಾ ಯೂಸುಫ್, ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಕಾರ್ಯದರ್ಶಿ ನಿದಾ ಆಫ್ರಾ ತಮ್ಮ ವಿಚಾರಗಳನ್ನು ಮಂಡಿಸಿದರು.

ಅಧ್ಯಕ್ಷತೆಯನ್ನು ಎನ್‌ಡಬ್ಲುಎಫ್ ರಾಜ್ಯ ಸಮಿತಿ ಸದಸ್ಯ ನಸೀಮಾ ಫಾತಿಮಾ ವಹಿಸಿದ್ದರು. ಎನ್‌ಡಬ್ಲುಎಫ್ ಉಡುಪಿ ಜಿಲ್ಲಾಧ್ಯಕ್ಷೆ ರಹ್ಮತುನ್ನಿಸ ಸ್ವಾಗತಿಸಿದರು. ಸಮ್ರಾನ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News