ಮಣಿಪುರ: ಮೊದಲ ಬಾರಿಗೆ ಸ್ವಂತ ಶಕ್ತಿಯಲ್ಲಿ ಸರಕಾರ ರಚನೆಯ ವಿಶ್ವಾಸದಲ್ಲಿ ಬಿಜೆಪಿ

Update: 2022-03-10 06:26 GMT

ಹೊಸದಿಲ್ಲಿ: ಮಾರ್ಚ್ 5 ರಂದು ಕೊನೆಗೊಂಡಿರುವ ಎರಡು ಹಂತದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಣಿಪುರದಲ್ಲಿ ಮರು ಆಯ್ಕೆ ಬಯಸಿದೆ. ಬಿಜೆಪಿ 60 ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಸ್ವಂತ ಬಲದಿಂದ ಗೆದ್ದುಕೊಂಡರೆ,ಈಶಾನ್ಯ ಗಡಿ ರಾಜ್ಯದಲ್ಲಿ ಮೊದಲ ಬಾರಿ ಪೂರ್ಣ ಪ್ರಮಾಣದ ಬಿಜೆಪಿ ಸರಕಾರ ರಚನೆಯಾಗಲಿದೆ.

 ಚುನಾವಣಾ ಆಯೋಗದ ಪ್ರಕಾರ ಬಿಜೆಪಿ ಸದ್ಯಕ್ಕೆ 23 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 11ರಲ್ಲಿ ಮುನ್ನಡೆಯಲ್ಲಿದೆ.

2017 ರ ಚುನಾವಣೆಯಲ್ಲಿ ಒಕ್ರಾಮ್ ಇಬೋಬಿ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವು ಮೂರು ಅವಧಿಯ ಅಧಿಕಾರವನ್ನು ಎದುರಿಸುತ್ತಿರುವಾಗಲೂ ಕೂಡ  ಬಿಜೆಪಿ ತನ್ನ ಎಲ್ಲಾ ಶಕ್ತಿಯೊಂದಿಗೆ ಕೇವಲ 21 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 28 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News