ಇವಿಎಂ ವಿರುದ್ಧ ದಿಲ್ಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
Update: 2022-03-10 12:27 IST
ಹೊಸದಿಲ್ಲಿ: ಇತ್ತೀಚಿನ ಅಧಿಕೃತ ಟ್ರೆಂಡ್‌ಗಳ ಪ್ರಕಾರ ಎಲ್ಲಾ ಐದು ರಾಜ್ಯಗಳಲ್ಲಿ ಪಕ್ಷವು ಹಿನ್ನಡೆ ಅನುಭವಿಸುತ್ತಿದ್ದಂತೆ ದಿಲ್ಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇವಿಎಂ ವಿರುದ್ಧ ಪ್ರತಿಭಟನೆ ನಡೆಸಿದರು.
ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ ಬೆಳಗ್ಗೆ ಆರಂಭವಾಗಿದ್ದು, ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಆಪ್ ವಿರುದ್ದ ತೀವ್ರ ಹಿನ್ನಡೆ ಕಂಡಿದೆ. ಅದೇ ರೀತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಉತ್ತರಾಖಂಡ, ಗೋವಾ ರಾಜ್ಯದಲ್ಲೂ ಹಿನ್ನಡೆಯಲ್ಲಿದೆ.