ಇದು ಸಾಹೇಬರ ಚಾಣಾಕ್ಷ ನಡೆ ಅಷ್ಟೇ... 2024 ರ ಕುರಿತ ಮೋದಿ ಹೇಳಿಕೆಗೆ ಪ್ರಶಾಂತ್ ಕಿಶೋರ್ ತಿರುಗೇಟು

Update: 2022-03-11 07:14 GMT
ಪ್ರಶಾಂತ್ ಕಿಶೋರ್

ಹೊಸದಿಲ್ಲಿ: ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಐದರಲ್ಲಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ ನಂತರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು "ಭಾರತಕ್ಕಾಗಿ ಹೋರಾಟವನ್ನು 2024ರಲ್ಲಿ ನಡೆಸಲಾಗುವುದು ಹಾಗೂ ನಿರ್ಧರಿಸಲಾಗುವುದು" ಎಂದು ಹೇಳಿದ್ದಾರೆ.

"ಭಾರತಕ್ಕಾಗಿ 2024 ರಲ್ಲಿ ಹೋರಾಡಲಾಗುತ್ತದೆ ಹಾಗೂ ನಿರ್ಧರಿಸಲಾಗುತ್ತದೆ. ಯಾವುದೇ ರಾಜ್ಯ ಚುನಾವಣೆಗಳಲ್ಲಿ ಅಲ್ಲ. ಇದು ಸಾಹೇಬರಿಗೆ ತಿಳಿದಿದೆ! ಆದ್ದರಿಂದ ವಿಪಕ್ಷಗಳ  ಮೇಲೆ ನಿರ್ಣಾಯಕ ಮಾನಸಿಕ ಲಾಭವನ್ನು ಗಳಿಸಲು ರಾಜ್ಯ ಫಲಿತಾಂಶಗಳ ಸುತ್ತ ಉನ್ಮಾದವನ್ನು ಸೃಷ್ಟಿಸುವ ಬುದ್ಧಿವಂತ ಪ್ರಯತ್ನಇದಾಗಿದೆ.  ಸುಳ್ಳು ನಿರೂಪಣೆಯೊಳಗೆ ಬೀಳಬೇಡಿ ಅಥವಾ ಇದರ ಭಾಗವಾಗಬೇಡಿ " ಎಂದು ಪ್ರಶಾಂತ್ ಕಿಶೋರ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಪಂಚ ರಾಜ್ಯ ಚುನಾವಣಾ ಫಲಿತಾಂಶಗಳು 2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಮುನ್ನೋಟವನ್ನು ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಹೇಳಿದ್ದಾರೆ.

"2017 ರ  ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾದಾಗ ಅದು 2019 ರ ಸಾರ್ವತ್ರಿಕ ಚುನಾವಣೆಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅನೇಕ ಜನರು ಹೇಳಿದ್ದರು" ಎಂದು ದಿಲ್ಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News