×
Ad

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರ, ವೀಡಿಯೊ ಅಪ್‌ಲೋಡ್; ಉಡುಪಿ ಜಿಲ್ಲೆಯ ಮೂವರ ವಿರುದ್ಧ ಪ್ರಕರಣ ದಾಖಲು

Update: 2022-03-11 21:00 IST

ಉಡುಪಿ, ಮಾ.11: ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಸಿಐಡಿ ವಿಶೇಷ ಘಟಕಗಳು ಹಾಗೂ ಆರ್ಥಿಕ ಅಪರಾಧಗಳು ಇಲ್ಲಿಂದ ಬಂದಿರುವ ವರದಿಯಂತೆ ಉಡುಪಿ ಜಿಲ್ಲೆಯ ಮೂವರ ವಿರುದ್ಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 67(ಬಿ) ಐ.ಟಿ.ಆ್ಯಕ್ಟ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಬಾರಕೂರು ಹನೇಹಳ್ಳಿಯ ಉಡ್ಡಾಲುಗುಡ್ಡೆಯ ಆನಂದ್ ಎಂಬಾತ 2021ರ ಜ.24ರಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ತನ್ನ ಖಾತೆಯಿಂದ ಅಶ್ಲೀಲ ಪೋಟೊಗಳನ್ನು ಅಪ್‌ಲೋಡ್ ಮಾಡಿದ್ದು, ಈ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬ್ರಹ್ಮಾವರ ಚಾಂತಾರು ಅಂಗಡಿಬೆಟ್ಟುನ ಕೊಲ್ವಿನ್ ಮೆನೆಜಸ್ 2021ರ ಜ.26ರಂದು ತನ್ನ ಫೇಸ್‌ಬುಕ್ ಖಾತೆಯಿಂದ ಅಶ್ಲೀಲ ವೀಡಿಯೊವನ್ನು ಅಪ್‌ಲೋಡ್ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಅದೇ ರೀತಿ ಬೊಮ್ಮರಬೆಟ್ಟು ನಿವಾಸಿ ರತ್ನಾಕರ ಎಂಬಾತ 2021ರ ಜ.23ರಂದು ಅಶ್ಲೀಲ ವೀಡಿಯೊ ಒಂದನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನ ತನ್ನ ಖಾತೆಯ ಮೂಲಕ ಅಪ್‌ಲೋಡ್ ಮಾಡಿರುವ ಬಗ್ಗೆ ಸಹ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News