×
Ad

ಸಹಾಯಧನ ಪಡೆಯಲು ಆಧಾರ್ ಜೋಡಣೆ ಕಡ್ಡಾಯ

Update: 2022-03-11 21:07 IST

ಉಡುಪಿ, ಮಾ.11:ಮೀನುಗಾರಿಕೆ ಇಲಾಖೆಯಡಿ ಸಹಾಯಧನ ಪಡೆಯಲು ಇಚ್ಛಿಸುವ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಬೇಕೆಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಈವರೆಗೆ ಆಧಾರ್ ಜೋಡಣೆಯಾಗದೆ ಸಹಾಯಧನ ಪಡೆಯಲು ಬಾಕಿ ಇರುವ ಮೀನುಗಾರಿಕಾ ಸಂಘದ ಸದಸ್ಯರು ಸಹಕಾರ ಸಂಘದ ಕಛೇರಿಗೆ ತಮ್ಮ ಆಧಾರ್‌ನ ಕಾರ್ಡ್ ಪ್ರತಿ ಮತ್ತು ಭಾವಚಿತ್ರದೊಂದಿಗೆ ಮಾರ್ಚ್ 15ರ ಅಪರಾಹ್ನ 2 ಗಂಟೆಗೆ ಭೇಟಿ ನೀಡಿ ಸೇವೆಯನ್ನು ಪಡೆದುಕೊಳ್ಳುವಂತೆ ಮೀನುಗಾರಿಕಾ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News