ಮಲ್ಪೆ: ಮಾ.13ರಂದು ಸಂಜೀವಿನಿ ಸ್ಟಾಲ್ ಉದ್ಘಾಟನೆ
Update: 2022-03-11 21:35 IST
ಉಡುಪಿ ಮಾ.11: ಜಿಲ್ಲಾ ಪಂಚಾಯತ್ ಉಡುಪಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ನಗರಸಭೆ ಉಡುಪಿ ಇವರ ಸಹಯೋಗದಲ್ಲಿ ಮಲ್ಪೆ ಸೀ ವಾಕ್ ನಲ್ಲಿರುವ ಸ್ಟಾಲ್ ನಲ್ಲಿ ಸಂಜೀವಿನಿ ಮಹಿಳೆಯರಿಗಾಗಿ ಅವರು ಉತ್ಪಾದಿಸಿರುವ ಉತ್ಪನ್ನಗಳ ಮಾರಾಟಕ್ಕಾಗಿ ಪ್ರತ್ಯೇಕ ಸ್ಟಾಲ್ ಸಜ್ಜು ಗೊಂಡಿದ್ದು ಇದರ ಉದ್ಘಾಟನೆಯನ್ನು ಶಾಸಕ ಕೆ.ರಘುಪತಿ ಭಟ್ ಮಾ.13ರ ಸಂಜೆ 5:00ಕ್ಕೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ .ನವೀನ್ ಭಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ .ನಗರಸಭೆ ಪೌರಾಯುಕ್ತ ಡಾ. ಉದಯ್ ಕುಮಾರ್ ಶೆಟ್ಟಿ ಇನ್ನಿತರರು ಭಾಗವಹಿಸಲಿದ್ದಾರೆ.