×
Ad

ಗರಿಷ್ಠ ಸಮಯವನ್ನು ಕ್ಷೇತ್ರಗಳಲ್ಲಿ ಕಳೆಯಿರಿ: ಶಾಸಕರಿಗೆ ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ಸಂದೇಶ

Update: 2022-03-12 07:57 IST
 ಭಗವಂತ್ ಮಾನ್ (PTI)

ಚಂಡೀಗಢ: ರಾಜಧಾನಿಯಲ್ಲಿ ಅಲೆದಾಡುವ ಬದಲು ಗರಿಷ್ಠ ಸಮಯವನ್ನು ಕ್ಷೇತ್ರಗಳಲ್ಲಿ ಕಳೆಯಿರಿ; ಸಚಿವ ಹುದ್ದೆಗೆ ಆಸೆ ಪಡಬೇಡಿ ಎಂದು ಪಂಜಾಬ್‍ನ ನಿಯೋಜಿತ ಮುಖ್ಯಮಂತ್ರಿ  ಭಗವಂತ್ ಮಾನ್ ಪಕ್ಷದ ಹೊಸ ಶಾಸಕರಿಗೆ ಕಟು ಸಂದೇಶ ರವಾನಿಸಿದ್ದಾರೆ.

ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿ ವಿಜಯ ಸಾಧಿಸಿದ ಬೆನ್ನಲ್ಲೇ ಮಾನ್ ಈ ಹೇಳಿಕೆ ನೀಡಿದ್ದಾರೆ. "ನಾವು ಎಲ್ಲೆಲ್ಲಿ ಮತ ಕೇಳಲು ಹೋಗಿದ್ದೇವೆಯೋ ಅಲ್ಲೆಲ್ಲ ನಾವು ಕೆಲಸ ಮಾಡಬೇಕು. ಎಲ್ಲ ಶಾಸಕರು ಚಂಡೀಗಢದಲ್ಲಿ ವಾಸ್ತವ್ಯ ಹೂಡದೇ ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸಬೇಕು" ಎಂದು ಎಎಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಮಾಡಿದ ಭಾಷಣದಲ್ಲಿ ಸೂಚಿಸಿದರು. ಭಗವಾನ್ ಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಂದಿನ ಬುಧವಾರ ನಡೆಯಲಿದೆ.

"ಮುಖ್ಯಮಂತ್ರಿ ಹುದ್ದೆ ಹೊರತುಪಡಿಸಿ 17 ಸಂಪುಟ ದರ್ಜೆ ಸಚಿವ ಸ್ಥಾನ ಇದೆ. ಯಾರೂ ಹತಾಶರಾಗುವ ಅಗತ್ಯವಿಲ್ಲ. ನೀವೆಲ್ಲ ಸಂಪುಟದರ್ಜೆ ಸಚಿವರಿದ್ದಂತೆ" ಎಂದು 92 ಮಂದಿ ಶಾಸಕರಿಗೆ ಕಿವಿಮಾತು ಹೇಳಿದರು. 177 ಸದಸ್ಯಬಲದ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 92 ಸ್ಥಾನಗಳನ್ನು ಗೆದ್ದಿದೆ. ಪಕ್ಷದ ಸಿಎಂ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟಿದ್ದ ಮಾನ್, ಧುರಿ ಕ್ಷೇತ್ರದಿಂದ 58 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದರು.

ಯಾವ ಶಾಸಕರೂ ದರ್ಪ ಬೆಳೆಸಿಕೊಳ್ಳದೇ, ಪಕ್ಷಕ್ಕೆ ಮತ ಹಾಕದವರಿಗಾಗಿಯೂ ಕೆಲಸ ಮಾಡಬೇಕು ಎಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News