×
Ad

ಏಕದಿನ ವಿಶ್ವಕಪ್: ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಶತಕ, ಭಾರತ 317/8

Update: 2022-03-12 12:11 IST
ಸ್ಮೃತಿ ಮಂಧಾನ

ಹ್ಯಾಮಿಲ್ಟನ್: ಸ್ಮೃತಿ  ಮಂಧಾನ ಹಾಗೂ  ಹರ್ಮನ್‌ಪ್ರೀತ್ ಕೌರ್ ಅವರು ವೆಸ್ಟ್ ಇಂಡೀಸ್ ವಿರುದ್ಧ 2022 ರ ಮಹಿಳಾ ವಿಶ್ವಕಪ್‌ನ 3 ನೇ ಪಂದ್ಯದಲ್ಲಿ ಶತಕವನ್ನು ಸಿಡಿಸುವ ಮೂಲಕ  ಭಾರತ 8 ವಿಕೆಟ್ ನಷ್ಟಕ್ಕೆ  317 ರನ್  ಗಳಿಸಲು ನೆರವಾದರು.

ಗುರುವಾರ ಆತಿಥೇಯ ನ್ಯೂಝಿಲ್ಯಾಂಡ್ ವಿರುದ್ಧ ಕಳಪೆ  ಪ್ರದರ್ಶನ ನೀಡಿದ ನಂತರ ಭಾರತ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ.

ಸ್ಮೃತಿ ಮಂಧಾನ ಕೇವಲ 119 ಎಸೆತಗಳಲ್ಲಿ 13  ಬೌಂಡರಿ, 2 ಸಿಕ್ಸರ್ ಒಳಗೊಂಡ 123 ರನ್ ಗಳಿಸಿದರೆ, ಹರ್ಮನ್‌ಪ್ರೀತ್ ಕೌರ್ 107 ಎಸೆತಗಳಲ್ಲಿ 10 ಬೌಂಡರಿ ಹಾಗೂ  2 ಸಿಕ್ಸರ್‌ಗಳನ್ನು ಒಳಗೊಂಡ 109 ರನ್ ಗಳಿಸಿದರು. ಇವರಿಬ್ಬರು 4ನೇ ವಿಕೆಟ್‌ಗೆ 184 ರನ್‌ಗಳ ಜೊತೆಯಾಟವನ್ನು ಸೇರಿಸಿ ಭಾರತವು  ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 300 ಕ್ಕಿಂತ ಹೆಚ್ಚಿನ ಸ್ಕೋರ್ ಗಳಿಸಲು ನೆರವಾದರು.

ಸ್ಮೃತಿ  ಹಾಗೂ  ಹರ್ಮನ್‌ಪ್ರೀತ್ ನಡುವಿನ 184 ರನ್‌ಗಳ ಜೊತೆಯಾಟವು ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿದೆ. ಏಕದಿನ  ಕ್ರಿಕೆಟ್‌ನಲ್ಲಿ ಇವರಿಬ್ಬರ 4 ನೇ ಅತ್ಯುನ್ನತ  ಜೊತೆಯಾಟವಾಗಿದೆ.

ಇದೇ ವೇಳೆ, ಹರ್ಮನ್‌ಪೀತ್ ಕೌರ್ ಮಹಿಳಾ ವಿಶ್ವಕಪ್‌ನಲ್ಲಿ 2 ಕ್ಕಿಂತ  ಹೆಚ್ಚು ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ತಮ್ಮ ಬ್ಯಾಟಿಂಗ್ ಪಾಲುದಾರರಾದ ಸ್ಮೃತಿ ಮಂಧಾನ ಹಾಗೂ  ನಾಯಕಿ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದರು. ಸ್ಮೃತಿ ಹಾಗೂ ಮಿಥಾಲಿ ವಿಶ್ವಕಪ್‌ನಲ್ಲಿ ತಲಾ 2 ಶತಕ ಸಿಡಿಸಿದ್ದಾರೆ.

ಸ್ಮೃತಿ ಮಂಧಾನ ಅವರು  (123 ರನ್) ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ ಮೊತ್ತ ದಾಖಲಿಸಿದ ಭಾರತದ ಬ್ಯಾಟರ್ ಎನಿಸಿದರು. ಭಾರತದ ಓಪನರ್ ಮಂಧಾನ ಭಾರತದ ಹೊರಗೆ ಅತಿ ಹೆಚ್ಚು ಶತಕಗಳನ್ನು(5) ಗಳಿಸಿ ನಾಯಕಿ ಮಿಥಾಲಿಯನ್ನು ಹಿಂದಿಕ್ಕಿ ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News