ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ : ಐತಿಹಾಸಿಕ ಮೈಲುಗಲ್ಲು ತಲುಪಿದ ಜೂಲನ್ ಗೋಸ್ವಾಮಿ

Update: 2022-03-12 08:10 GMT
Photo: AFP

ಹ್ಯಾಮಿಲ್ಟನ್: ವೆಸ್ಟ್ ಇಂಡೀಸ್ ವಿರುದ್ಧ ಶನಿವಾರ ನಡೆದ  ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ  ಒಂದು ವಿಕೆಟನ್ನು ಕಬಳಿಸಿದ ಭಾರತದ ಹಿರಿಯ ವೇಗದ ಬೌಲರ್ ಜೂಲನ್ ಗೋಸ್ವಾಮಿ ಐತಿಹಾಸಿಕ ಮೈಲುಗಲ್ಲು ತಲುಪಿದರು.

ಜೂಲನ್ ಈಗ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ 40 ವಿಕೆಟ್‌ಗಳೊಂದಿಗೆ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ಅವರು ಆಸ್ಟ್ರೇಲಿಯಾದ ಲಿನ್ ಫುಲ್ಸ್ಟನ್ (39 ವಿಕೆಟ್ ) ಅವರನ್ನು ಹಿಂದಿಕ್ಕಿದ್ದಾರೆ

ಭಾರತವು ವಿಶ್ವಕಪ್ ನಲ್ಲಿ ಆಡಿರುವ ತನ್ನ 3ನೇ  ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ್ನು 155 ರನ್ ಗಳ ಅಂತರದಿಂದ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ಸ್ಮೃತಿ  ಮಂಧಾನ ಹಾಗೂ  ಹರ್ಮನ್‌ಪ್ರೀತ್ ಕೌರ್ ಅವರ  ಶತಕದ ನೆರವಿನಿಂದ   ನಿಗದಿತ 50 ಓವರ್ ಗಳಲ್ಲಿ  8 ವಿಕೆಟ್ ನಷ್ಟಕ್ಕೆ  317 ರನ್  ಗಳಿಸಿತು.

ಗೆಲ್ಲಲು ಕಠಿಣ ಗುರಿ ಪಡೆದಿದ್ದ ವಿಂಡೀಸ್ 40.3 ಓವರ್ ಗಳಲ್ಲಿ 162 ರನ್ ಗೆ ಆಲೌಟಾಯಿತು.  ಭಾರತದ ಪರ ಸ್ನೇಹ್ ರಾಣಾ(3-22) ಹಾಗೂ ಮೇಘನಾ ಸಿಂಗ್(2-27) ಐದು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News