ಸಂಜೀವಿನಿ ಉತ್ಪನ್ನ ಮಳಿಗೆ ಜಿಲ್ಲೆಯಾದ್ಯಂತ ಪ್ರಾರಂಭಗೊಳ್ಳಲಿ: ಸಿಇಓ
ಉಡುಪಿ : ಸಂಜೀವಿನಿಯಂತಹ ಉತ್ಪನ್ನಗಳ ಮಳಿಗೆ ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಪ್ರಾರಂಭಗೊಳ್ಳಲಿ ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ನವೀನ್ ಭಟ್ ವೈ. ಹೇಳಿದ್ದಾರೆ.
ಜಿಪಂ, ತಾಪಂ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ನಗರ ಸಭೆ ಉಡುಪಿ ಇವರ ಸಹಯೋಗದಲ್ಲಿ ಮಲ್ಪೆಯ ಸೀ ವಾಕ್ ಬಳಿ ಉಡುಪಿ ಸಂಜೀವಿನಿ ತ್ರಿಶಕ್ತಿ ಸಂಜೀವಿನಿ ಸ್ವಸಹಾಯ ಗುಂಪುಗಳ ಉತ್ಪನ್ನ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಸಂಜೀವಿನಿ ಮಳಿಗೆಯನ್ನು ಉದ್ಘಾಟಿಸಿದ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಮಾತನಾಡಿ, ತ್ರಿಶಕ್ತಿ ಸಂಜೀವಿನಿ ಜನ ಜಂಗುಳಿ ಇರುವ ಕಡೆ ತನ್ನ ಮಳಿಗೆಯನ್ನ ತೆರೆದಿರುವುದು ಜಿಲ್ಲೆಗೆ ಮಾದರಿಯಾಗಿದೆ. ಮಹಿಳೆಯರು ಅಂಗಡಿಗಳನ್ನು ನಡೆಸುವುದರೊಂದಿಗೆ ಉದ್ಯಮವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ಸುಂದರ ಕಲ್ಮಾಡಿ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ, ಮಲ್ಪೆ ಬೀಚ್ ನಿರ್ವಾಹಕರಾದ ಸಂದೇಶ್ ಶೆಟ್ಟಿ, ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿ ಸಿಲ್ವಾ, ಎನ್‌ಆರ್‌ಎಲ್‌ಎಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್, ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ವಲಯ ಮೇಲ್ವಿಚಾರಕ ಸಂತೋಷ್, ಬಡಾನಿಡಿಯೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾಲತಿ, ಉಪಾಧ್ಯಕ್ಷೆ ಶೀಲಾ, ಸದಸ್ಯರಾದ ಜೊಸೆಫ್ ಫೆರ್ನಾಂಡಿಸ್, ಮಾಜಿ ಅಧ್ಯಕ್ಷ ಉಮೇಶ್ ಪೂಜಾರಿ ಹಾಗೂ ಸಂಜೀವಿನಿ ಸ್ವಸಹಾಯ ಸಂಘದ ತಾರಾ ಪ್ರಭಾಕರ್, ಲತಾ ಟಿ. ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.