ತಂದೆತಾಯಿಗೆ ಅನಾರೋಗ್ಯ: ಮಗ ಆತ್ಮಹತ್ಯೆ
Update: 2022-03-14 21:27 IST
ಕಾಪು : ತಂದೆ ತಾಯಿಯ ಅನಾರೋಗ್ಯದಿಂದ ಮನನೊಂದ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.13ರಂದು ಬೆಳಗ್ಗೆ ಉದ್ಯಾವರದ ಶಂಭು ಕಲ್ಲು ದೇವಸ್ಥಾನ ಸಮೀಪ ನಡೆದಿದೆ.
ಮೃತರನ್ನು ಉದ್ಯಾವರ ಶಂಭುಕಲ್ಲು ದೇವಸ್ಥಾನದ ಬಳಿ ನಿವಾಸಿ ಕೃಷ್ಣ ಭಂಡಾರಿ ಎಂಬವರ ಮಗ ಸಚಿನ್ ಭಂಡಾರಿ (28) ಎಂದು ಗುರುತಿಸಲಾಗಿದೆ. ಲೈನ್ ಸೇಲ್ ಕೆಲಸ ಮಾಡಿಕೊಂಡಿರುವ ಸಚಿನ್, ಅವರ ಮನೆ ಇತ್ತೀಚೆಗೆ ಬಿದ್ದಿರುವು ದರಿಂದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು.
ತಂದೆ ತಾಯಿ ಅನಾರೋಗ್ಯದಲ್ಲಿರುವುದರಿಂದ ಮಾನಸಿಕವಾಗಿ ನೊಂದ ಸಚಿನ್, ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.