×
Ad

ಕಾಬೆಟ್ಟು ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ ಸೊತ್ತುಗಳಿಗೆ ಹಾನಿ

Update: 2022-03-14 21:34 IST

ಕಾರ್ಕಳ : ಕಾಬೆಟ್ಟು ಎಂಬಲ್ಲಿರುವ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ಲ್ಯಾಬ್ ಕಟ್ಟಡದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ಮಾ.12 ರಂದು ರಾತ್ರಿ ವೇಳೆ ನಡೆದಿದೆ.

ಕಾಬೆಟ್ಟು ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ಲ್ಯಾಬ್ ಕಟ್ಟಡದ ಕಿಟಕಿ ಗಾಜುಗಳನ್ನು ಹಾಗೂ ಟೆಕ್‌ ಲ್ಯಾಬ್ ಒಳಗಿನ ಅಲ್ಯುಮೀನಿಯಂ ಪಾರ್ಟಿಷನ್‌ಗಳನ್ನು ಕಿಡಿಗೇಡಿಗಳು ಒಡೆದು ಸುಮಾರು ೪ ಲಕ್ಷ ನಷ್ಟ ಉಂಟು ಮಾಡಿದ್ದು, ನಂತರ ಎರಡೂ ಕಟ್ಟಡದ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಸೊತ್ತುಗಳನ್ನು ಕಳವು ಮಾಡಲು ಪ್ರಯತ್ನಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News