ಜಾಮೀನು ಅರ್ಜಿ ವಿಚಾರಣೆಗೆ ಒಂದು ದಿನ ಇರುವಾಗ ಶ್ರೀನಗರ ಪತ್ರಕರ್ತ ಫಹಾದ್ ಶಾ ವಿರುದ್ಧ UAPA ಹೇರಿದ ಪೊಲೀಸರು

Update: 2022-03-15 07:27 GMT

ಶ್ರೀನಗರ: ಶ್ರೀನಗರ ಮೂಲದ ಪತ್ರಕರ್ತ ಹಾಗೂ ದಿ ಕಾಶ್ಮೀರ್ ವಾಲಾ ಸುದ್ದಿ ತಾಣ ಇದರ ಮುಖ್ಯ ಸಂಪಾದಕ ಫಹಾದ್ ಶಾ ಅವರ ಜಾಮೀನು ಅರ್ಜಿ ವಿಚಾರಣೆಗೆ ಇನ್ನೇನು ಒಂದು ದಿನ ಇದೆ ಎನ್ನುವಾಗ ಸೋಮವಾರ ಜಮ್ಮು ಕಾಶ್ಮೀರ ಪೊಲೀಸರು ಅವರ ವಿರುದ್ಧ ಸಾರ್ವಜನಿಕ ಸುರಕ್ಷತೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

ಫೆಬ್ರವರಿ 4ರಿಂದ ಜೈಲಿನಲ್ಲಿರುವ ಫಹಾದ್ ಅವರ ವಿರುದ್ಧದ ಆರೋಪಗಳು ಅವರು ಯಾವುದೇ ಅಪರಾಧೆವೆಸಗಿರುವುದಕ್ಕೆ ಪೂರಕವಾಗಿಲ್ಲದೇ ಇರುವುದರಿಂದ ಇಂದು ನ್ಯಾಯಾಲಯ ಜಾಮೀನು ನೀಡಬಹುದೆಂದು ತಿಳಿದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅವರ ವಿರುದ್ಧ ಸಾರ್ವಜನಿಕ ಸುರಕ್ಷತೆ ಕಾಯಿದೆ ಹೇರಿ ಅವರು ಜೈಲಿನಲ್ಲಿಯೇ ಉಳಿಯುವಂತಾಗಲು ಹಾಗೂ ತಮ್ಮ ಪತ್ರಕರ್ತ ವೃತ್ತಿಯನ್ನು ಮುಂದುವರಿಸುವುದನ್ನು ತಡೆಯುವ ಉದ್ದೇಶ ಹೊಂದಿದ್ದಾರೆ ಎಂದು ಫಹಾದ್ ಅವರ ವಕೀಲರು ಹೇಳಿದ್ದಾರಲ್ಲದೆ ಇದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ, ಇದರ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಲಾಗುವುದು ಎಂದಿದ್ದಾರೆ.

ಮಾರ್ಚ್ 5ರಂದು ಫಹಾದ್ ಅವರಿಗೆ  ಅವರ  ಕಾಶ್ಮಿರ್ ವಾಲ ಸುದ್ದಿ ತಾಣದ ವಿರುದ್ಧ  ಐಪಿಸಿ ಸೆಕ್ಷನ್ 153 ಮತ್ತು 505 ನ್ವಯ ದಾಖಲಾದ ಪ್ರಕರಣ ಸಂಬಂಧ ಜಾಮೀನು ದೊರಕಿತ್ತು. ಆದರೆ ಮಾರ್ಚ್ 11ರಂದು ಅವರನ್ನು ಬಂಧಿಸಿ 5 ದಿನಗಳ ರಿಮಾಂಡ್ ವಿಧಿಸಲಾಗಿದೆ ಕಳೆದ 37 ದಿನಗಳ ಅವಧಿಯಲ್ಲಿ ಅವರ ವಿರುದ್ಧ ಯುಎಪಿಎ ಅಡಿ ಇದು ಎರಡನೇ ಪ್ರಕರಣ ಎಂದು ಅವರ ವಕೀಲ ಉಮೈರ್ ರೋಂಗ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಶ್ರೀನಗರದ ನವಾ ಕಡಲ್ ಪ್ರದೇಶದಲ್ಲಿ ಮೇ 19, 2020ರಂದು ನಡೆದ ಎನ್‍ಕೌಂಟರ್ ಸಂಬಂಧ  ಫಹಾದ್ ಅವರ ಸುದ್ದಿ ತಾಣ ಪ್ರಕಟಿಸಿದ ವರದಿ ಸಂಬಂಧ ಪ್ರಕರಣ ದಾಖಲಾಗಿತ್ತು. ಭದ್ರತಾ ಪಡೆಗಳು ಮನೆಗಳಿಗೆ ಬೆಂಕಿ ಹಚ್ಚಿ ಹಣ  ಮತ್ತು ಚಿನ್ನಾಭರಣ ಲೂಟಿಗೈದಿವೆ ಎಂದು ಸ್ಥಳೀಯರು ಆರೋಪಿಸಿದ್ದರೆ ಅಧಿಕಾರಿಗಳು ಈ ಆರೋಪ ನಿರಾಕರಿಸಿದ್ದರು. ಎರಡೂ ಕಡೆಗಳ ಹೇಳಿಕೆಗಳನ್ನು ಕಾಶ್ಮೀರ ವಾಲಾ ಸಹಿತ ಹಲವು ಇತರ ಮಾಧ್ಯಮಗಳು ವರದಿ ಮಾಡಿವೆ.

ಈ ಸಂಬಂಧ ಫಹಾದ್ ಅವರಿಗೆ ಮೂರು ಬಾರಿ ಸಮನ್ಸ್ ಜಾರಿಯಾಗಿತ್ತು ಹಾಗೂ ಪ್ರತಿಬಾರಿಯೂ ಅವರು ತನಿಖೆಗೆ ಸಹರಿಸಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳುತ್ತಾರೆ.

ಫೆಬ್ರವರಿ 4ರಂದು ಪುಲ್ವಾಮ ಜಿಲ್ಲೆಯಲ್ಲಿ ಮೂವರು ಶಂಕಿತ ಉಗ್ರರು ಹಾಗೂ ಒಬ್ಬ ಹದಿಹರೆಯದ ಬಾಲಕ ವಿವಾದಿತ ಎನ್‍ಕೌಂಟರ್‍ನಲ್ಲಿ ಮೃತಪಟ್ಟ ಪ್ರಕರಣದ ವರದಿಗಾಗಿ ಕಾಶ್ಮಿರ್ ವಾಲ ವಿರುದ್ಧ ಮೊದಲ ಬಾರಿ ದೇಶದ್ರೋಹದ ಪ್ರಕರಣ ಫೆಬ್ರವರಿ 4ರಂದು ದಾಖಲಿಸಲಾಗಿತ್ತು. ಮೃತ ಬಾಲಕ ಒಬ್ಬ ಉಗ್ರನಾಗಿದ್ದ ಎಂದು ಪೊಲೀಸರು ಹೇಳಿದ್ದರೆ ಬಾಲಕನ ಕುಟುಂಬ ಮಾತ್ರ ಆತ ನಿರಪರಾಧಿ ಎಂದು ವಾದಿಸಿತ್ತು. ಇದನ್ನು ವರದಿ ಮಾಡಿದ್ದಕ್ಕಾಗಿ `ಉಗ್ರವಾದವನ್ನು ವೈಭವೀಕರಿಸುತ್ತಿದ್ದಾರೆ ಎಂದು ಫಹಾದ್ ವಿರುದ್ದ ಎಫ್‍ಐಆರ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News