ಕಾಶ್ಮೀರಿ ಪಂಡಿತರ ಪಲಾಯನ ವೇಳೆ ಬಿಜೆಪಿಯ 85 ಸಂಸದರು ಏನು ಮಾಡುತ್ತಿದ್ದರು?: ಕಾಂಗ್ರೆಸ್ ವಾಗ್ದಾಳಿ
ಹೊಸದಿಲ್ಲಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶದ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದ್ವೇಷ ಮತ್ತು ಸುಳ್ಳು ಹರಡುವ ಮೂಲಕ ಎಷ್ಟು ರಾಜಕೀಯ ಅವಕಾಶಗಳನ್ನು ಪಡೆಯಲು ಬಯಸಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
"ನಿಮ್ಮ ಪೋಷಕ ಸಂಸ್ಥೆ 1925ರಲ್ಲಿ ಆರಂಭವಾದಾಗಿನಿಂದಲೂ ಅದು ದೇಶದ ಸ್ವಾತಂತ್ರ್ಯ ಹೋರಾಟದ ಮತ್ತು ಬಾಪು ವಿರುದ್ಧ ಸಂಘಟನೆ ವಿರುದ್ಧ ನಿಂತಿದೆ. ಅಸಹಕಾರ ಚಳವಳಿ, ನಾಗರಿಕ ಅವಿಧೇಯ ಚಳವಳಿ ಅಥವಾ ಭಾರತ ಬಿಟ್ಟು ತೊಲಗಿ ಚಳವಳಿ ಹೀಗೆ ಪ್ರತಿ ಬಾರಿಯೂ ಅದು ಬ್ರಿಟಿಷರ ಪರವಾಗಿ ನಿಂತಿದೆ. ದೇಶ ಸ್ವತಂತ್ರ್ಯಗೊಂಡಾಗ ಮೊದಲ ದಿನದಿಂದಲೂ ಅದು ಒಡೆದು ಆಳುವ ನೀತಿ ಅನುಸರಿಸುತ್ತಾ ಬಂದಿದೆ" ಎಂದು ಸುರ್ಜೇವಾಲಾ ಟ್ವೀಟಿಸಿದ್ದಾರೆ.
ಕಾಶ್ಮೀರಿ ಪಂಡಿತರ ಪಲಾಯನಕ್ಕೆ ರಾಜ್ಯಪಾಲ ಜಗ್‍ಮೋಹನ್ ಅವರನ್ನು ದೂಷಿಸಿದ ಕಾಂಗ್ರೆಸ್, ಕಾಶ್ಮೀರಿ ಪಂಡಿತರು ನಿರ್ಗಮಿಸುವಾಗ ಬಿಜೆಪಿ 85 ಸಂಸದರನ್ನು ಹೊಂದಿತ್ತು. ಆಗ ಬಿಜೆಪಿಯ ಸಂಸದರು ಏನು ಮಾಡುತ್ತಿದ್ದರು? ಯಾರ ಬೆಂಬಲದಲ್ಲಿ ವಿ.ಪಿ.ಸಿಂಗ್ ಸರ್ಕಾರ ಕೇಂದ್ರ ಸರ್ಕಾರವನ್ನು ನಡೆಸುತ್ತಿತ್ತು? ಸಿಎಂಗೆ ಭದ್ರತೆ ನೀಡುವ ಬದಲು, ರಾಜ್ಯಪಾಲರು ಪಂಡಿತರು ಪಲಾಯನ ಮಾಡುವಂತೆ ಏಕೆ ಕುಮ್ಮಕ್ಕು ನೀಡಿದರು? ಎಂದು ಪ್ರಶ್ನಿಸಿದ್ದಾರೆ.
"ನೆನಪಿಟ್ಟುಕೊಳ್ಳಿ; ಕಾಶ್ಮೀರಿ ಪಂಡಿತರಿಗೆ ಕಿರುಕುಳ ನೀಡಿದಾಗ ಮತ್ತು ಅವರು ಓಡಿಹೋಗಿರುವುದು ಬಿಜೆಪಿ ಬೆಂಬಲಿತ ಸರ್ಕಾರ ಇದ್ದ ಅವಧಿಯಲ್ಲಿ. ರಾಜೀವ್ ಗಾಂಧಿಯವರು ಸಂಸತ್‍ನಲ್ಲಿ ಘೇರಾವ್ ನಡೆಸಿ, ಧ್ವನಿ ಎತ್ತಿದ್ದರು. ಆದರೆ ಬಿಜೆಪಿ ಈ ದುರಂತಕ್ಕೆ ಕುಟಿಲ ಬೆಂಬಲ ನೀಡಿತು. ರಾಜಕೀಯ ಲಾಭಕ್ಕಾಗಿ ರಥಯಾತ್ರೆ ನಡೆಸಿತು'' ಎಂದು ಲೇವಡಿ ಮಾಡಿದ್ದಾರೆ.
ಕಣಿವೆ ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಮಾಡಿದ ಕಾರ್ಯಗಳನ್ನು ಪಟ್ಟಿ ಮಾಡಿರುವ ಅವರು, ಇದೀಗ ಕಾಶ್ಮೀರ ಸ್ಥಿತಿ ಹದಗೆಟ್ಟಿದೆ. ಆದ್ದರಿಂದ ಚಲನಚಿತ್ರ ತೋರಿಸಲು ಹೊರಟಿದ್ದಾರೆ. "ದ್ವೇಷ ಬೆಳೆಸುವ ಮೂಲಕ ಲಾಭವನ್ನು ಎಷ್ಟರವರೆಗೆ ಕೊಯ್ಲು ಮಾಡಲು ಹೊರಟಿದ್ದೀರಿ" ಎಂದು ಪ್ರಶ್ನಿಸಿದ್ದಾರೆ.
3/n
— Randeep Singh Surjewala (@rssurjewala) March 15, 2022
मोदी जी बताएँ-
जब 1990 में कश्मीरी पंडित आतंक और बर्बरता के साये में पलायन को मजबूर हुए
तब भाजपा के 85 सांसद, जिनके समर्थन से केंद्र की वी.पी.सिंह सरकार चल रही थी, क्या कर रहे थे?
CM को हटाकर उनके बिठाए राज्यपाल ने सुरक्षा देने की बजाय पंडितों को पलायन के लिए क्यों उकसाया?