×
Ad

2021ರ ಜನವರಿ ಬಳಿಕ ಚೀನಾದಲ್ಲಿ ಕೋವಿಡ್ ನಿಂದ ಮೊದಲ ಸಾವು

Update: 2022-03-19 14:30 IST

ಬೀಜಿಂಗ್: ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ  ಎರಡು ಕೋವಿಡ್ ಸಾವುಗಳನ್ನು ವರದಿ ಮಾಡಿದೆ.  2021 ಜನವರಿ ಬಳಿಕ ದೇಶದಲ್ಲಿ ಈ ರೋಗದಿಂದಾಗಿ ಮೊದಲ ಸಾವು ಸಂಭವಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ದೇಶದಲ್ಲಿ ಮುಖ್ಯವಾಗಿ ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಶನಿವಾರ 2,157 ಹೊಸ ಕೋವಿಡ್ ಪ್ರಕರಣಗಳು ವರದಿ ಆಗಿದ್ದು, ವರದಿಯ ಪ್ರಕಾರ ಇಲ್ಲಿ ಎರಡು ಸಾವುಗಳು ಸಂಭವಿಸಿವೆ.

ಸಾಂಕ್ರಾಮಿಕ ರೋಗವು 2019 ರ ಕೊನೆಯಲ್ಲಿ ಆರಂಭವಾದಾಗಿನಿಂದ ಚೀನಾದಲ್ಲಿ ಕೊರೋನವೈರಸ್ ಪ್ರಕರಣ ಏರಿಕೆಯಾಗಿದೆ. ಕೋವಿಡ್ -19 ರ ಓಮಿಕ್ರಾನ್ ರೂಪಾಂತರದಿಂದ ಪ್ರಕರಣ ಉಲ್ಬಣವಾಗಿದೆ. ಇದು ಕಳೆದ ನವೆಂಬರ್‌ನಲ್ಲಿ ಮೊದಲಿಗೆ ಪತ್ತೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News