ಉಕ್ರೇನ್‌ನಲ್ಲಿ ಹಾರಾಟ ನಿಷೇಧ ವಲಯ ಘೋಷಣೆ ಸಾಧ್ಯವಿಲ್ಲ : ಅಮೆರಿಕ ಸ್ಪಷ್ಟನೆ

Update: 2022-03-19 15:20 GMT
Photo: PTI

ವಾಷಿಂಗ್ಟನ್, ಮಾ.19: ಉಕ್ರೇನ್‌ನಲ್ಲಿ ನಡೆಯುತ್ತಿರುವ ಕಾದಾಟದಲ್ಲಿ ಅಮೆರಿಕ ತೊಡಗಿಸಿಕೊಳ್ಳುವುದಿಲ್ಲ ಅಥವಾ ಆ ದೇಶದ ವಾಯುಕ್ಷೇತ್ರವನ್ನು ಹಾರಾಟ ನಿಷೇಧ ವಲಯ ಎಂದು ಘೋಷಿಸುವುದಿಲ್ಲ ಎಂದು ಪೆಂಟಗಾನ್ ಮುಖ್ಯಸ್ಥ ಲಾಯ್ಡಿ ಆಸ್ಟಿನ್ ಹೇಳಿರುವುದಾಗಿ ಸಿಎನ್‌ಎನ್ ಮಾಧ್ಯಮ ವರದಿ ಮಾಡಿದೆ.

ರಶ್ಯ-ಉಕ್ರೇನ್ ಯುದ್ಧದಲ್ಲಿ ನಮ್ಮ ಪಡೆ ಪಾಲ್ಗೊಳ್ಳುವುದಿಲ್ಲ ಮತ್ತು ಹಾರಾಟ ನಿಷೇಧ ವಲಯವನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವುದಿಲ್ಲ ಎಂದು ಅಧ್ಯಕ್ಷರು (ಜೋ ಬೈಡನ್) ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹಾರಾಟ ನಿಷೇಧ ವಲಯವನ್ನು ಘೋಷಿಸಿದರೆ ನಾವು ಉಕ್ರೇನ್, ಬೆಲಾರಸ್ ಮತ್ತು ರಶ್ಯದಲ್ಲಿ ರಶ್ಯದ ವಿಮಾನಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗೆ ಮಾಡಿದರೆ ನಾವು ರಶ್ಯದೊಂದಿಗೆ ಯುದ್ಧ ನಡೆಸಿದಂತಾಗುತ್ತದೆ. ರಶ್ಯ ಮತ್ತು ಅಮೆರಿಕ ಪರಮಾಣು ಶಕ್ತ ದೇಶಗಳಾಗಿದ್ದು ಇವೆರಡರ ಮಧ್ಯೆ ಯುದ್ಧ ನಡೆಯಬೇಕೆಂದು ಯಾರೂ ಬಯಸುವುದಿಲ್ಲ. ಇದು ಈ ವಲಯಕ್ಕಷ್ಟೇ ಅಲ್ಲ, ವಿಶ್ವಕ್ಕೇ ಸಮಸ್ಯೆ ತರಲಿದೆ ಎಂದು ಆಸ್ಟಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News