ನಾಗಾಲ್ಯಾಂಡ್ ವಿಧಾನ ಸಭೆಯ ಉಪ ಸ್ಪೀಕರ್ ಆಗಿ ಯಾಂಗ್ಸಿಯೊ ಸಂಗ್ಟಂ ಆಯ್ಕೆ

Update: 2022-03-19 16:51 GMT

ಕೋಹಿಮಾ, ಮಾ. 19: ಪಕ್ಷೇತರ ಶಾಸಕ ಟಿ.ಯಾಂಗ್ಸಿಯೊ ಸಂಗ್ಟಂ ಅವರು ನಾಗಾಲ್ಯಾಂಡ್ ವಿಧಾನ ಸಭೆಯ ಉಪ ಸ್ಪೀಕರ್ ಆಗಿ ಶನಿವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಯುನೈಟೆಡ್ ಡೆಮಾಕ್ರೆಟಿಕ್ ಅಲಯನ್ಸ್ (ಯುಡಿಎ)ನ ಅಭ್ಯರ್ಥಿಯಾಗಿರುವ ಸಂಗ್ಟಂ ಅವರು ಪುಂಗ್ರೊ-ಕಿಫೈರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ನಾಗಾಲ್ಯಾಂಡ್ ವಿಧಾನ ಸಭೆಯ ಉಪ ಸ್ಪೀಕರ್ ಹುದ್ದೆ 2020 ಫೆಬ್ರವರಿಯಿಂದ ಖಾಲಿ ಇತ್ತು. ಎನ್‌ಪಿಎಫ್ ಶಾಸಕ ಟಿ. ಟೊರೆಚು ಅವರು ನಿಧನದಿಂದ ಖಾಲಿಯಾಗಿದ್ದ ಸ್ಥಾನಕ್ಕೆ 2020 ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ 39ರ ಹರೆಯ ಸಂಗ್ಟಂ ಅವರು ಜಯ ಗಳಿಸಿದ್ದರು. ಇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಸ್ಪೀಕರ್ ಶರಿಂಗೈನ್ ಲೋಂಗ್‌ಕುಮೇರ್ ಅವರು ಸಂಗ್ಟಂ ಅವರನ್ನು ಉಪ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಿ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News