ಅಸ್ಸಾಂನಿಂದ ರಿಪುನ್ ಬೋರಾ, ಕೇರಳದಿಂದ ಜೆಬಿ ಮಾಥರ್ ಕಾಂಗ್ರೆಸ್‌ನ ರಾಜ್ಯ ಸಭೆ ಅಭ್ಯರ್ಥಿ
Update: 2022-03-19 22:23 IST
ತಿರುವನಂತಪುರ, ಮಾ. 19: ಅಸ್ಸಾಂನಿಂದ ರಿಪುನ್ ಬೋರಾ ಹಾಗೂ ಕೇರಳದಿಂದ ಜೆಬಿ ಮಾಥರ್ ಅವರನ್ನು ರಾಜ್ಯ ಸಭೆ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ನಾಮ ನಿರ್ದೇಶನಗೊಳಿಸಿದೆ. 42 ವರ್ಷಗಳ ಬಳಿಕ ಕೇರಳದಿಂದ ನಾಮನಿರ್ದೇಶನಗೊಳ್ಳುತ್ತಿರುವ ಮೊದಲ ಮಹಿಳಾ ಕಾಂಗ್ರೆಸ್ ಅಭ್ಯರ್ಥಿ ಎಂಬ ಖ್ಯಾತಿಗೆ ಮಾಥರ್ ಒಳಗಾಗಿದ್ದಾರೆ.
43 ವರ್ಷದ ಜೆಪಿ ಮಾಥರ್ ಸದ್ಯ ಕೇರಳದ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಹಾಗೂ ಆಲುವಾ ಮುನ್ಸಿಪಾಲಿಟಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಎಐಸಿಸಿ ಪ್ರಕಟಣೆ ಹೊರಡಿಸಿದ್ದು, ರಾಜ್ಯಸಭೆಗೆ ಕೇರಳದಿಂದ ಜೆಬಿ ಮಾಥುರ್ ಹಾಗೂ ಅಸ್ಸಾಂನಿಂದ ರಿಪುನ್ ಬೋರಾ ಅವರನ್ನು ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದನೆ ನೀಡಿದ್ದಾರೆ ಎಂದು ಹೇಳಿದೆ. ರಾಜ್ಯ ಸಭೆ ಚುನಾವಣೆ ಮಾರ್ಚ್ 31ರಂದು ನಡೆಯಲಿದೆ.