ಪರಂಪರೆಯ ವಿನಾಶ: ಕೊನೆಗೂ ನೆಲಸಮಗೊಂಡ ಹೈದರಾಬಾದ್ ನ ಐತಿಹಾಸಿಕ ಖುಸ್ರೋ ಮಂಝಿಲ್
ಹೈದರಾಬಾದ್: ಹಲವು ವರ್ಷಗಳಿಂದ ಹಂತಹಂತವಾಗಿ ಕೆಡವಲಾಗುತ್ತಿದ್ದ ಖುಸ್ರೋ ಮಂಝಿಲ್ ಎಂಬ ಪಾರಂಪರಿಕ ಕಟ್ಟಡವನ್ನು ಗುರುವಾರ ರಾತ್ರಿ ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ. 2013 ರಲ್ಲಿ ಈ ಕಟ್ಟಡವನ್ನು ಕೆಡವಲು ಪ್ರಾರಂಭವಾಗಿದ್ದು, ಇದೀಗ ಕೇವಲ ಅವಶೇಷಗಳು ಮಾತ್ರ ಉಳಿದಿವೆ.
1920 ರ ದಶಕದಲ್ಲಿ ನಿರ್ಮಿಸಲಾದ ಕಟ್ಟಡವನ್ನು HUDA (ಹೈದರಾಬಾದ್ ನಗರಾಭಿವೃದ್ಧಿ ಪ್ರಾಧಿಕಾರ) ಮಾರ್ಗಸೂಚಿಗಳ ಅಡಿಯಲ್ಲಿ ಗ್ರೇಡ್ III ಪರಂಪರೆಯ ರಚನೆ ಎಂದು ವರ್ಗೀಕರಿಸಲಾಗಿತ್ತು. ಕಟ್ಟಡವನ್ನು ಕೆಡವಲು ಮಾಲಕರಿಗೆ ಎಂದಿಗೂ ಅನುಮತಿ ನೀಡಿಲ್ಲ ಎಂದು HMDA ಹೇಳಿದ್ದರೂ, ಅದನ್ನು ನಾಶಪಡಿಸಲಾಗಿದೆ.
ಇದನ್ನು ದುರಂತ ಎಂದು ಕರೆದಿರುವ INTACH ನ ಸಂಚಾಲಕಿ ಅನುರಾಧಾ ರೆಡ್ಡಿ, "ಈ ಕಟ್ಟಡಗಳ ಬಗ್ಗೆ ಕಾಳಜಿ ವಹಿಸಬೇಕಾದ ಸರ್ಕಾರಕ್ಕೆ ಅವುಗಳ ಬಗ್ಗೆ ತಿಳಿದಿಲ್ಲ ಅಥವಾ ಕಾಳಜಿಯಿಲ್ಲ. ಖಾಸಗಿ ಒಡೆತನದ ಪಾರಂಪರಿಕ ತಾಣಗಳಿಗೆ ತೆರಿಗೆ ರಿಯಾಯಿತಿಗಳ ರೂಪದಲ್ಲಿ ಸರ್ಕಾರದಿಂದ ಪರಿಹಾರ ನೀಡಲಾಗುವುದು ಅಥವಾ ಪರಂಪರೆಯ ಮರುಸ್ಥಾಪನೆಗೆ ಸಹಾಯ ಮಾಡುವ ಭರವಸೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಖಾಸಗಿ ಒಡೆತನದ ಪಾರಂಪರಿಕ ಕಟ್ಟಡಗಳ ವಿಷಯದಲ್ಲಿಯೂ ಸಹ, ಅಂತಿಮವಾಗಿ ನಗರದ ಗುರುತು ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳುವ, ಮರುಸ್ಥಾಪಿಸುವ ಮತ್ತು ಸಂರಕ್ಷಿಸುವ ಜವಾಬ್ದಾರಿಯು ಸರ್ಕಾರಕ್ಕೆ ಬರುತ್ತದೆ ಎಂದು ರೆಡ್ಡಿ ಹೇಳಿದರು.
"ಸಿಮೆಂಟ್ ಮೇಲ್ಸೇತುವೆ ನೋಡಲು ಯಾರೂ ಹಣ ನೀಡುವುದಿಲ್ಲ, ಆದರೆ ನಗರದ ಪರಂಪರೆಯನ್ನು ನೋಡಲು ಜನರು ಹಣ ಪಾವತಿಸುತ್ತಾರೆ" ಎಂದು ಅವರು ಹೇಳಿದರು.
ಹೈದರಾಬಾದ್ ಇತಿಹಾಸಕಾರ ಮತ್ತು ಸಂರಕ್ಷಣಾಧಿಕಾರಿ ಸಜ್ಜಾದ್ ಶಾಹಿದ್, ಹಳೆಯ ಹೈದರಾಬಾದ್ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿರುವ ಕಟ್ಟಡಗಳನ್ನು ಕಿತ್ತುಹಾಕುವುದಾಗಿ ಸರ್ಕಾರವು ಹಲವು ಬಾರಿ ಸ್ಪಷ್ಟ ಸಂದೇಶಗಳನ್ನು ಕಳುಹಿಸಿದೆ ಎಂದು ಹೇಳುತ್ತಾರೆ.
“ನಗರದಲ್ಲಿ ಕೆಲವೇ ಕೆಲವು ಪಾರಂಪರಿಕ ಕಟ್ಟಡಗಳಿವೆ ಮತ್ತು ನಾವು ಅವುಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಅಧಿಕಾರಿಗಳು ಆಸಕ್ತಿ ಹೊಂದಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸೂಚಕವಾಗಿದೆ. ಈ ಕಟ್ಟಡಗಳನ್ನು ರಕ್ಷಿಸುವಲ್ಲಿ ನಾವು ಸಮಾಜವಾಗಿ ವಿಫಲರಾಗುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಖುಸ್ರೋ ಮಂಝಿಲ್ ಅನ್ನು ಹೈದರಾಬಾದ್‌ನ ಏಳನೇ ಮತ್ತು ಕೊನೆಯ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ (1886-1967) ಸಮಯದಲ್ಲಿ ನಿರ್ಮಿಸಲಾಯಿತು. ಅವರು 1911 ರಲ್ಲಿ ರಾಜರಾಗಿ ನೇಮಕಗೊಂಡಿದ್ದರು. ಖುಸ್ರೋ ಮಂಝಿಲ್ ನಿಜಾಮರ ಪಡೆಗಳ ಮುಖ್ಯ ಕಮಾಂಡಿಂಗ್ ಆಫೀಸರ್ ಖುಸ್ರೋ ಜಂಗ್ ಬಹದ್ದೂರ್ ಅವರ ನಿವಾಸವಾಗಿತ್ತು.
Complete shocker. No other city in India has so bad a record of destroying its heritage as Hyderabad. Barbarous vandalism. pic.twitter.com/wnYdiE7Xhl
— William Dalrymple (@DalrympleWill) March 20, 2022