ಆರ್‌ಎಲ್ಡಿಯ ಉತ್ತರಪ್ರದೇಶ ವರಿಷ್ಠ ಮಸೂದ್ ಅಹ್ಮದ್ ರಾಜೀನಾಮೆ
Update: 2022-03-20 22:47 IST
ಲಕ್ನೋ, ಮಾ. 20: ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ)ದ ಉತ್ತರಪ್ರದೇಶದ ವರಿಷ್ಠ ಮಸೂದ್ ಅಹ್ಮದ್ ಶನಿವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ಮಾರಾಟ ಮಾಡಲಾಗಿದೆ. ಅಲ್ಲದೆ, ದಲಿತರು ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ನಿರ್ಲಕ್ಷಿಸಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆರ್ಎಲ್ಡಿ ವರಿಷ್ಠ ಜಯಂತ್ ಚೌಧರಿ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಮಸೂದ್ ಅಹ್ಮದ್, ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಗೆ ಮುನ್ನ ಪಕ್ಷ ಅನರ್ಹರಿೆ ಟಿಕೆಟ್ ಮಾರಾಟ ಮಾಡಿದೆ ಎಂದಿದ್ದಾರೆ.
‘‘ಪಕ್ಷ ಹಾಗೂ ಮಿತ್ರ ಪಕ್ಷಗಳು ಈ ವಿಷಯಗಳ ಬಗ್ಗೆ ಕಾಳಜಿ ವಹಿಸಲಿವೆ ಎಂದು ನಾನು ಭಾವಿಸುತ್ತೇನೆ. ಆಗ ಮಾತ್ರ ಭವಿಷ್ಯದಲ್ಲಿ ಉತ್ತರಪ್ರದೇಶದಲ್ಲಿ ಸರಕಾರ ರೂಪಿಸಲು ಸಾಧ್ಯ. ಎಸ್ಪಿ-ಆರ್ಎಲ್ಡಿಯ ಮೈತ್ರಿಯ ಎಲ್ಲ ಕಾಯಕರ್ತರು ಬಿಜೆಪಿಯ ವಿರುದ್ಧ ಹೋರಾಡುವ ಬದಲು ಸ್ಥಾನಕ್ಕಾಗಿ ತಮ್ಮಾಳಗೆ ಹೋರಾಡುತ್ತಿದ್ದಾರೆ’’ ಎಂದು ಮಸೂದ್ ಅಹ್ಮದ್ ಹೇಳಿದ್ದಾರೆ.