ನಡಾಲ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಜಯಿಸಿದ ಟೇಲರ್

Update: 2022-03-21 05:27 GMT
Photo:USA TODAY 

ಇಂಡಿಯನ್ ವೆಲ್ಸ್: ಸ್ಪೇನ್ ಸೂಪರ್ ಸ್ಟಾರ್ ರಫೆಲ್ ನಡಾಲ್ ಅವರನ್ನು ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 6-3, 7-6(7/5) ಸೆಟ್ ಗಳ ಅಂತರದಿಂದ ಸೋಲಿಸಿ ಶಾಕ್ ನೀಡಿದ ಅಮೆರಿಕ ಆಟಗಾರ ಟೇಲರ್ ಫ್ರಿಟ್ಝ್ ಎಟಿಪಿ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದರು.

ಈ ವರ್ಷ ಸತತ 20 ಪಂದ್ಯಗಳನ್ನು ಜಯಿಸಿದ್ದ ದಾಖಲೆಯ 21 ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ನಡಾಲ್ ಅವರ ಗೆಲುವಿನ ಓಟಕ್ಕೆ ವಿಶ್ವದ ನಂ.20ನೇ ಆಟಗಾರ ಟೇಲರ್ ಬ್ರೇಕ್ ಹಾಕಿದರು.

ನಡಾಲ್ ಗೆ ದಾಖಲೆಯ 37ನೇ ಮಾಸ್ಟರ್ಸ್ ಪ್ರಶಸ್ತಿಯನ್ನು ನಿರಾಕರಿಸಿದ ಟೇಲರ್ ವೃತ್ತಿಜೀವನದಲ್ಲಿ  ಎರಡನೇ ಪ್ರಶಸ್ತಿ ಗೆದ್ದುಕೊಂಡರು.

ತೀವ್ರ ಕಾಲುನೋವು ಬಾಧಿಸಿದರೂ ಅದರಿಂದ ದೃತಿಗಡೆದ 24ರ ಹರೆಯದ ಟೇಲರ್ ವೃತ್ತಿಜೀವನದಲ್ಲಿ ಮಹತ್ವದ ಸಾಧನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News