ಆಡಿಯೋ ಟೇಪ್ ಸೋರಿಕೆ ಪ್ರಕರಣ: ಇಡಿ ಅಧಿಕಾರಿಗಳಿಗೆ ಕೋಲ್ಕತ್ತಾ ಪೊಲೀಸ್ ಸಮನ್ಸ್

Update: 2022-03-21 05:42 GMT

ಕೋಲ್ಕತಾ: ಆಡಿಯೋ ಟೇಪ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಹಿರಿಯ ಅಧಿಕಾರಿ ಸೇರಿದಂತೆ ಮೂವರು ಹಿರಿಯ ಜಾರಿ ನಿರ್ದೇಶನಾಲಯ (ಇಡಿ) ಸಿಬ್ಬಂದಿಗೆ ಕೋಲ್ಕತ್ತಾ ಪೊಲೀಸರು ರವಿವಾರ ಸಮನ್ಸ್ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನದ ಸುಮಾರಿಗೆ ಕಾಲಿಘಾಟ್ ಪೊಲೀಸ್ ಠಾಣೆಯಲ್ಲಿ ಪತ್ತೇದಾರಿ ವಿಭಾಗದ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಇಡಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ದನ ಕಳ್ಳಸಾಗಣೆ ಹಾಗೂ  ಕಲ್ಲಿದ್ದಲು ಹಗರಣದಂತಹ ವಿಷಯಗಳ ಕುರಿತು ಇಡಿ ಅಧಿಕಾರಿಯೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್‌ ಬಹಿರಂಗವಾದ ಬಳಿಕ ಉದ್ಯಮಿಯೊಬ್ಬನ  ವಿರುದ್ಧ ಕೋಲ್ಕತ್ತಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News