ಪಂಜಾಬ್‍ನ 11 ನೂತನ ಸಚಿವರ ಪೈಕಿ 7 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು, 9 ಮಂದಿ ಕೋಟ್ಯಧಿಪತಿಗಳು

Update: 2022-03-21 12:20 GMT

ಹೊಸದಿಲ್ಲಿ: ಪಂಜಾಬ್‍ನ ನೂತನ ಆಪ್ ಸರಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವ 11 ಸಚಿವರುಗಳ ಪೈಕಿ ಏಳು ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಹಾಗೂ ಇವರಲ್ಲಿ ನಾಲ್ಕು ಮಂದಿಯ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಹೇಳಿದೆ.

ಪಂಜಾಬ್‍ನ ನೂತನ ಸಿಎಂ ಭಗವಂತ್ ಮಾನ್ ಸಹಿತ ಎಲ್ಲಾ 11 ಸಚಿವರುಗಳು ಚುನಾವಣಾ ಅಫಿಡವಿಟ್‍ಗಳನ್ನು ಪರಿಶೀಲಿಸಿದ ಎಡಿಆರ್ ಇಂದು ತನ್ನ ವರದಿ ಬಿಡುಗಡೆಗೊಳಿಸಿದೆ.

ನೂತನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಹಿತ 11 ಮಂದಿ ಇದ್ದಾರೆ.À ಅವರ ಪೈಕಿ ಏಳು ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆಯೆಂದಾದರೆ ಅವರ ಪ್ರಮಾಣ ಶೇ 64ರಷ್ಟಾದಂತಾಗಿದೆ. ಉಳಿದಂತೆ ನಾಲ್ಕು ಮಂದಿಯ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ಇರುವುದರಿಂದ ಒಟ್ಟು ಸಚಿವರ ಪೈಕಿ ಶೇ 36ರಷ್ಟು ಮಂದಿಯ ವಿರುದ್ಧ ಗಂಭೀರ ಅಪರಾಧ ಪ್ರಕರಣ ಇದ್ದಂತಾಗಿದೆ.

ಒಟ್ಟು 11 ಸಚಿವರುಗಳ ಪೈಕಿ ಒಂಬತ್ತು ಮಂದಿ ಕೋಟ್ಯಾಧಿಪತಿಗಳಾಗಿದ್ದು ಅವರ ಸರಾಸರಿ ಸಂಪತ್ತಿನ ಮೌಲ್ಯ ರೂ 2.87 ಕೋಟಿ ಆಗಿದೆ. ಹೋಶಿಯಾರಪುರ್ ಶಾಸಕ, ನೂತನ ಸಚಿವ ಬ್ರಮ್ ಶಂಕರ್ ಅವರು ಅತ್ಯಂತ ಶ್ರೀಮಂತ ಸಚಿವರಾಗಿದ್ದು ಅವರ ಒಟ್ಟು ಆಸ್ತಿ ಮೌಲ್ಯ ರೂ 8.56 ಕೋಟಿ ಆಗಿದೆ. ಸಚಿವರುಗಳ ಪೈಕಿ ಭೋವಾ ಕ್ಷೇತ್ರವನ್ನು ಪ್ರತಿನಿಧಿಸುವ ಲಾಲ್ ಚಂದ್ ಅವರ ಆದಾಯ ಕನಿಷ್ಠವಾಗಿದ್ದು ಅವರ ಒಟ್ಟು ಘೋಷಿತ ಆದಾಯ ರೂ 6.19 ಲಕ್ಷ ಆಗಿದೆ.

ಒಟ್ಟು ಐದು ಸಚಿವರು (ಶೇ 45)  ಹತ್ತರಿಂದ ಹನ್ನೆರಡನೇ ತರಗತಿ ತನಕ ಕಲಿತವರಾಗಿದ್ದರೆ ಉಳಿದವರು ಪದವೀಧರರು ಅಥವಾ ಅದಕ್ಕಿಂತ ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News