"ಯಾರೋ ನನ್ನ ಕೆಲಸಗಳನ್ನು ಗುರುತಿಸಿದರು": ಪದ್ಮಭೂಷಣ ಸ್ವೀಕರಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್
Update: 2022-03-22 11:52 IST
ಹೊಸದಿಲ್ಲಿ: ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್, "ಒಬ್ಬರ ಕೆಲಸವನ್ನು ದೇಶ ಅಥವಾ ಸರಕಾರ ಗುರುತಿಸಿದಾಗ ಸಂತೋಷವಾಗುತ್ತದೆ. ಯಾರೋ ನನ್ನ ಕೆಲಸಗಳನ್ನು ಗುರುತಿಸಿದರು" ಎಂದು ಹೇಳಿದರು.
"ಬೇರೊಬ್ಬರು ನನ್ನ ಕೆಲಸವನ್ನು ಗುರುತಿಸಿದಾಗ ಅದನ್ನು ನಾನು ಇಷ್ಟಪಡುತ್ತೇನೆ. ನನ್ನ ಜೀವನದ ವಿವಿಧ ಹಂತಗಳಲ್ಲಿ ನನ್ನ ಏರಿಳಿತದ ಸಮಯದಲ್ಲಿಯೂ ಕೂಡ, ನಾನು ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿ ಅಥವಾ ಜಮ್ಮುವಿನ (ಮಾಜಿ) ಮುಖ್ಯಮಂತ್ರಿಯಾಗಿ ಯಾವಾಗಲೂ ಜನರಿಗಾಗಿ ಕೆಲಸ ಮಾಡಲು ಶ್ರಮಿಸಿದ್ದೇನೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಮತ್ತು ದೇಶದ ಜನರು ನೀಡಿದ ಪ್ರಶಸ್ತಿಯಿಂದ ನನಗೆ ಸಂತೋಷವಾಗಿದೆ'' ಎಂದು ಆಝಾದ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.