ರೊಹಿಂಗ್ಯಾ ಮುಸ್ಲಿಮರ ವಿರುದ್ಧ ʼನರಮೇಧʼ ಎಸಗಿದ ಮ್ಯಾನ್ಮಾರ್‌ ಸೇನೆ: ಅಮೆರಿಕ ಘೋಷಣೆ

Update: 2022-03-22 07:34 GMT

ನ್ಯೂಯಾರ್ಕ್: ರೊಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮ್ಯಾನ್ಮಾರ್ ಮಿಲಿಟರಿ ನಡೆಸಿದ ಹಿಂಸಾಚಾರವು ನರಮೇಧಕ್ಕೆ ಸಮನಾಗಿದೆ ಎಂದು ಅಮೆರಿಕಾ ಅಧಿಕೃತವಾಗಿ ಘೋಷಿಸಿದೆ. ಇದು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವನ್ನು "ನಾಶ" ಮಾಡುವ ಪ್ರಯತ್ನವಾಗಿದೆ ಎಂಬುವುದರ ಕುರಿತು ಸ್ಪಷ್ಟ ಪುರಾವೆಗಳಿವೆ ಎಂದು ಅದು ಹೇಳಿದೆ.

ವಾಷಿಂಗ್ಟನ್‌ನಲ್ಲಿರುವ US ಹತ್ಯಾಕಾಂಡದ ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ಮಾತನಾಡುತ್ತಾ, US ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸಾವಿರಾರು ಜನರ ಹತ್ಯೆಗಳನ್ನು ಉಲ್ಲೇಖಿಸಿದ್ದಾರೆ, 2016 ಮತ್ತು 2017 ವರ್ಷಗಳಲ್ಲಿ ಸುಮಾರು ಒಂದು ಮಿಲಿಯನ್ ಜನರು ಮ್ಯಾನ್ಮಾರ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಅವರು ಹೇಳಿದರು.

"ಹತ್ಯಾಕಾಂಡ ಮಾತ್ರವಲ್ಲದೇ, ನರಮೇಧವನ್ನು ಏಳು ಬಾರಿ ನಡೆಸಲಾಗಿದೆ ಎಂದು ಯುನೈಟೆಡ್‌ ಸ್ಟೇಟ್ಸ್ ತೀರ್ಮಾನಿಸಿದೆ" ಎಂದು ಅವರು ಹೇಳಿದೆ.

ಬ್ಲಿಂಕೆನ್ ಅವರು, "ಬರ್ಮಾ ಮಿಲಿಟರಿ ಸದಸ್ಯರು ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನರಮೇಧ ಮತ್ತು ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ನಾವು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾಗಿ ಮಾಧ್ಯಮ ಸಂಸ್ಥೆ ಅಲ್ ಜಜೀರಾ ವರದಿ ಮಾಡಿದೆ.Al Jazeera ವರದಿ ಮಾಡಿದೆ.

ʼರೋಹಿಂಗ್ಯಾ ಮುಸ್ಲಿಮರ ವಿರುದ್ಧದ ದಾಳಿʼ ವ್ಯವಸ್ಥಿತ ಮತ್ತು ವ್ಯಾಪಕವಾಗಿದೆ, ಇದು "ಮಾನವೀಯತೆಯ ವಿರುದ್ಧದ ಅಪರಾಧಗಳ ನಿರ್ಣಯವನ್ನು ತಲುಪುವಲ್ಲಿ ಮುಖ್ಯವಾಗಿದೆ ಎಂದು ಅವರು ಹೇಳಿದರು. ಮ್ಯಾನ್ಮಾರ್ ಸೇನೆಯು "ಈ ಸಾಮೂಹಿಕ ದೌರ್ಜನ್ಯಗಳ ಹಿಂದೆ ಸ್ಪಷ್ಟ ಉದ್ದೇಶವನ್ನು" ಹೊಂದಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಬ್ಲಿಂಕನ್ ಹೇಳಿಳಿದ್ದಾರೆ. ಅದು "ರೋಹಿಂಗ್ಯಾರನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಮಾಡುವ ಉದ್ದೇಶವಾಗಿತ್ತು" ಎಂದೂ ಅವರು ಉಲ್ಲೇಖಿಸಿದ್ದಾರೆ.

ಮಿಲಿಟರಿ ಅಧಿಕಾರಿಗಳ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಈ ದಾಳಿಯ ಸಮಯದಲ್ಲಿ ಕೂಗಿದ ಕೆಲವು ಜನಾಂಗೀಯ ನಿಂದನೆಯ ಘೋಷಣೆಗಳ ಜೊತೆಗೆ ಪಕ್ಷಾಂತರ ಮಾಡಿದ ಅಲ್ಪಸಂಖ್ಯಾತರು ಮತ್ತು ಮ್ಯಾನ್ಮಾರ್ ಸೈನಿಕರ ಸಾಕ್ಷ್ಯಗಳ ಸರಣಿಯನ್ನು ಅವರು ಉಲ್ಲೇಖಿಸಿದ್ದಾರೆ. 2012 ರಿಂದ, ಒಂದು ದಶಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ರಾಖೈನ್‌ನಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News