×
Ad

ಎಸ್ಸೆಸ್ಸೆಫ್ ದ.ಕ ವೆಸ್ಟ್ ನಿಂದ 'ಎನ್ಲೈವನ್ ಲೀಡರ್ಶಿಪ್' ಕಾರ್ಯಗಾರ

Update: 2022-03-24 23:52 IST

ಮಂಗಳೂರು: ಎಸ್ಸೆಸ್ಸೆಫ್  ದ. ಕ  ವೆಸ್ಟ್ ಜಿಲ್ಲಾ ವತಿಯಿಂದ ENLIVEN ಲೀಡರ್ಷಿಪ್ ಕ್ಯಾಂಪ್ ಮುಡಿಪು ರಾಯಲ್ ಗಾರ್ಡನ್ ಹಾಲ್ ನಲ್ಲಿ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಆಬಿದ್ ನಈಮಿ ದುಆ ಗೈದರು. ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಉದ್ಘಾಟಿಸಿದರು. 

ರಾಜ್ಯ ರೀಡ್ ಪ್ಲಸ್ ಕಾರ್ಯದರ್ಶಿ  ಹುಸೈನ್ ಸ ಅದಿ ಹೊಸ್ಮಾರ್ ಹಾಗೂ  ಕೇರಳ ರಾಜ್ಯ ಎಸ್.ವೈ.ಎಸ್ ನಾಯಕರಾದ ಅಬ್ದುರ್ರಹ್ಮಾನ್ ಸಖಾಫಿ ಚಿಪ್ಪಾರ್ ತರಗತಿ ನಡೆಸಿದರು.

ವೇದಿಕೆಯಲ್ಲಿ ರಾಜ್ಯ ದಅವಾ  ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ರಾಜ್ಯ ನಾಯಕರಾದ ಸಯ್ಯಿದ್  ಖುಬೈಬ್ ತಂಙಳ್,ಹೈದರ್ ಕಾಟಿಪಳ್ಳ ಹಾಗೂ ಜಿಲ್ಲಾ ನಾಯಕರುಗಳು ಉಪಸ್ಥಿತರಿದ್ದರು.

ಜಿಲ್ಲಾ ಕ್ಯೂ. ಡಿ ಕನ್ವಿನರ್ ಮನ್ಸೂರ್ ಹಿಮಮಿ ಸ್ವಾಗತಿಸಿದರು. ಜಿಲ್ಲಾ ಪ್ರದಾನ ಕಾರ್ಯದರ್ಶಿ ನೌಫಲ್ ಫರೀದ್  ನಗರ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News