ಸೌದಿ: ಗಡಿಭದ್ರತಾ ಪಡೆಯಲ್ಲಿ ಮಹಿಳೆಯರಿಗೆ ಅವಕಾಶ

Update: 2022-03-26 05:54 GMT

ರಿಯಾದ್: ಗಡಿಭದ್ರತಾ ಪಡೆಯಲ್ಲಿ ಯೋಧರ ಶ್ರೇಣಿಯಲ್ಲಿ ಸೇವೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸೌದಿ ಅರೆಬಿಯಾದ ಆಂತರಿಕ ಸಚಿವಾಲಯ ಗುರುವಾರ ಘೋಷಿಸಿದೆ.

 ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 26ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದ್ದು ಮಾರ್ಚ್ 31ರ ಬೆಳಿಗ್ಗೆ 10 ಗಂಟೆಯವರೆಗೆ ಅವಕಾಶ ಇರುತ್ತದೆ. ಅಬ್ಶೇರ್ ಪೋರ್ಟಲ್ ನ ಉದ್ಯೋಗ ವಿಭಾಗಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಹೇಳಿದೆ. 

ಸೌದಿ ಅರೆಬಿಯಾದ ಸಶಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸಲು 2021ರ ಫೆಬ್ರವರಿಯಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಅವಕಾಶ ಒದಗಿಸಲಾಗಿದೆ. ಸೌದಿ ಅರೆಬಿಯಾ ಸೇನೆ, ವಾಯುಪಡೆ, ನೌಕಾಪಡೆ, ಕಾರ್ಯತಂತ್ರದ ಕ್ಷಿಪಣಿ ಪಡೆ ಹಾಗೂ ಶಸಸ್ತ್ರ ದಳದ ವೈದ್ಯಕೀಯ ಸೇವಾ ವಿಭಾಗದಲ್ಲಿ ಯೋಧರಿಂದ ಸಾರ್ಜಂಟ್ ವರೆಗಿನ ಶ್ರೇಣಿಯ ಹುದ್ದೆಗಳಿಗೆ ಮಹಿಳೆಯರಿಗೂ ಅವಕಾಶ ನೀಡಲಾಗಿದೆ. ಕಳೆದ ಸೆಪ್ಟಂಬರ್ ನಲ್ಲಿ ಸೌದಿಯ ಮಹಿಳಾ ಕೇಡರ್ ತರಬೇತಿ ಕೇಂದ್ರದಲ್ಲಿ ಪ್ರಥಮ ಮಹಿಳಾ ಯೋಧರ ತಂಡ 14 ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News