×
Ad

ರಿಲಯನ್ಸ್ ಪವರ್, ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ

Update: 2022-03-26 11:39 IST
ಅನಿಲ್ ಅಂಬಾನಿ (PTI)

ಹೊಸದಿಲ್ಲಿ: ರಿಲಯನ್ಸ್ ಪವರ್(Reliance Power) ಮತ್ತು ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್(Reliance Infrastructure) ಸಂಸ್ಥೆಗಳ ನಿರ್ದೇಕ ಸ್ಥಾನಕ್ಕೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ(Anil Ambani) ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಯಾವುದೇ ಲಿಸ್ಟೆಡ್ ಕಂಪೆನಿ ಜತೆ ನಂಟು ಹೊಂದುವುದಕ್ಕೆ ಅನಿಲ್ ಅಂಬಾನಿ ಅವರಿಗೆ ಸೆಬಿ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಅವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸೆಬಿ ನೀಡಿದ ಮಧ್ಯಂತರ ಆದೇಶವನ್ನು ಪಾಲಿಸಲು ಆಡಳಿತ ಮಂಡಳಿಗೆ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ ಎಂದು ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆ ಹೇಳಿದೆ.

ಕಂಪೆನಿಯಿಂದ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆಂಬ ಆರೋಪದ ಮೇಲೆ ಅನಿಲ್ ಅಂಬಾನಿ ಮತ್ತು ಮೂವರು ಇತರರನ್ನು ಸೆಕ್ಯುರಿಟೀಸ್ ಮಾರ್ಕೆಟ್‍ನಿಂದ ಸೆಬಿ ಫೆಬ್ರವರಿ ತಿಂಗಳಿನಲ್ಲಿ ಹೊರಗಿಟ್ಟಿತ್ತು.

ಅನಿಲ್ ಅಂಬಾನಿ ಅವರಿಂದ ತೆರವಾದ ಸ್ಥಾನಕ್ಕೆ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಹೆಚ್ಚುವರಿ ನಿರ್ದೇಶಕರಾಗಿ  ರಾಹುಲ್ ಸರೀನ್ ಅವರನ್ನು ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಐದು ವರ್ಷಗಳ ಅವಧಿಗೆ ನೇಮಿಸಿವೆ. ಆದರೆ ಈ ನೇಮಕಾತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅನುಮತಿಗೆ ಒಳಪಟ್ಟಿದೆ.

72 ವರ್ಷದ ರಾಹುಲ್ ಸರೀನ್ ಅವರು ಈ ಹಿಂದೆ ಭಾರತ ಸರಕಾರದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.

ಅದೇ ಸಮಯ ಕಂಪನಿಯ ನಿರ್ದೇಶಕ ಮಂಡಳಿಯು ಅನಿಲ್ ಅಂಬಾನಿ ಅವರ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸವಿರಿಸಿದೆ ಹಾಗೂ ಕಂಪೆನಿಯನ್ನು ಆರ್ಥಿಕ ಸವಾಲುಗಳಿಂದ ಹೊರತರಲು ಅವರು ಪಟ್ಟ ಶ್ರಮವನ್ನು ಶ್ಲಾಘಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News