ಮಾ. 28ರಂದು ಅಂಬಲಪಾಡಿಯಲ್ಲಿ ಗ್ರಾಹಕರ ಸಮಾವೇಶ
Update: 2022-03-26 19:47 IST
ಉಡುಪಿ : ಬಳಕೆದಾರರ ವೇದಿಕೆ ಉಡುಪಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಉಡುಪಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಸಹಯೋಗದೊಂದಿಗೆ ಅಂಬಲಪಾಡಿ ಗ್ರಾಮ ಪಂಚಾಯತ್‌ನ ಗ್ರಾಮೀಣ ಜನರಿಗೆ ಗ್ರಾಹಕ ಜಾಗೃತಿ ಮತ್ತು ಇತರ ಪುರೋಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಮಾ.28ರ ಸೋಮವಾರ ಗ್ರಾಹಕರ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮ ಅಂಬಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನದವರೆಗೆ ನಡೆಯ ಲಿದೆ. ಗ್ರಾಮಸ್ಥರು ಇದರ ಸದುಪ ಯೋಗವನ್ನು ಪಡೆದುಕೊಳ್ಳುವಂತೆ ಬಳಕೆದಾರರ ವೇದಿಕೆಯ ಸಂಚಾಲಕ ಎ.ಪಿ. ಕೊಡಂಚ ತಿಳಿಸಿದ್ದಾರೆ.