ಐಪಿಎಲ್: ಲಸಿತ್ ಮಾಲಿಂಗ ದಾಖಲೆ ಸರಿಗಟ್ಟಿದ ಡ್ವೇಯ್ನ್ ಬ್ರಾವೊ

Update: 2022-03-27 06:59 GMT

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯೊಂದಿಗೆ 15ನೇ ಆವೃತ್ತಿಯ ಐಪಿಎಲ್ ಗೆ ಶನಿವಾರ ಸಂಜೆ ಚಾಲನೆ ದೊರೆತಿದೆ. ರವೀಂದ್ರ ಜಡೇಜ ನೇತೃತ್ವದ ಚೆನ್ನೈ ತಂಡವು ಸೋಲನುಭವಿಸಿದೆ. ಆದರೆ ಚೆನ್ನೈ ಆಲ್ ರೌಂಡರ್ ಡ್ವೇಯ್ನ್ ಬ್ರಾವೊ ಅವರು ಟೂರ್ನಿಯಲ್ಲಿ ಲಸಿತ್ ಮಾಲಿಂಗ ನಿರ್ಮಿಸಿರುವ ಬೃಹತ್ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. 

ಟ್ವೆಂಟಿ-20 ವಿಶ್ವಕಪ್ ವಿಜೇತ ತಂಡದ ಸದಸ್ಯ ಬ್ರಾವೊಗೆ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಲು ಕೇವಲ 1 ವಿಕೆಟ್ ಅಗತ್ಯವಿದೆ.

ಬ್ರಾವೊ ಕೆಕೆಆರ್ ವಿರುದ್ಧ 3 ವಿಕೆಟ್ ಗಳನ್ನು ಕಬಳಿಸಿದ್ದರು. ಆದರೆ ಅವರ ಪ್ರಯತ್ನ ಸಿಎಸ್ ಕೆ ಗೆಲುವಿಗೆ ಸಾಕಾಗಲಿಲ್ಲ.

ಕೆಕೆಆರ್ ವಿರುದ್ಧ 3 ವಿಕೆಟ್ ಗಳನ್ನು ಕಬಳಿಸಿರುವ ಬ್ರಾವೊ ಮುಂಬೈನ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ್ ಅವರ ಐಪಿಎಲ್ ದಾಖಲೆ(170 ವಿಕೆಟ್)ಸರಿಗಟ್ಟಿದರು. ಇದೀಗ ಬ್ರಾವೊ ಹಾಗೂ ಮಾಲಿಂಗ ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಗರಿಷ್ಠ ವಿಕೆಟ್ ಪಡೆದಿದ್ದಾರೆ.

ವಿಂಡೀಸ್ ನ ಮಾಜಿ ಆಲ್ ರೌಂಡರ್ ಬ್ರಾವೊ ಐಪಿಎಲ್ ನಲ್ಲಿ ಆಡಿರುವ ತನ್ನ 151ನೇ ಪಂದ್ಯದಲ್ಲಿ ಮಾಲಿಂಗ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮಾಲಿಂಗ 122 ಐಪಿಎಲ್ ಪಂದ್ಯಗಳಲ್ಲಿ ಒಟ್ಟು 170 ವಿಕೆಟ್ ಗಳನ್ನು ಪಡೆದಿದ್ದರು.

ಮಾಲಿಂಗ ಪ್ರಸ್ತುತ ರಾಜಸ್ಥಾನ ರಾಯಲ್ಸ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿದ್ದಾರೆ. ಭಾರತದ ಸ್ಪಿನ್ನರ್ ಗಳಾದ ಅಮಿತ್ ಶಾ(166) ಹಾಗೂ ಪಿಯೂಷ್ ಚಾವ್ಲಾ(157) ಐಪಿಎಲ್ ನಲ್ಲಿ ಗರಿಷ್ಟ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News