×
Ad

ಜಮ್ಮು-ಕಾಶ್ಮೀರ: ವಿಶೇಷ ಪೊಲೀಸ್ ಅಧಿಕಾರಿ, ಅವರ ಸಹೋದರನನ್ನು ಹತ್ಯೆಗೈದ ಉಗ್ರರು

Update: 2022-03-27 15:15 IST
ಸಾಂದರ್ಭಿಕ ಚಿತ್ರ (PTI)

ಶ್ರೀನಗರ: ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ ನಂತರ ವಿಶೇಷ ಪೊಲೀಸ್ ಅಧಿಕಾರಿ ಮತ್ತು ಅವರ ಸಹೋದರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರು ಅಧಿಕಾರಿ ಇಶ್ಫಾಕ್ ಅಹ್ಮದ್ ಅವರನ್ನು ಬುದ್ಗಾಮ್‌ನ ಚಾದ್‌ಬುಗ್ ಗ್ರಾಮದ ಅವರ ಮನೆಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಉಗ್ರರು ಇಶ್ಫಾಕ್ ಅಹ್ಮದ್ ಅವರ ಸಹೋದರ ಉಮರ್ ಜಾನ್‌ನ ಮೇಲೂ ಗುಂಡು ಹಾರಿಸಿದ್ದು ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ  ಉಮರ್ ಜಾನ್ ಶ್ರೀನಗರದ ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ದಾಳಿ ನಡೆದ ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಎನ್‌ಡಿಟಿವಿ ಪ್ರಕಾರ, ಕಳೆದೊಂದು ತಿಂಗಳಲ್ಲಿ ಬುದ್ಗಾಮ್‌ನಲ್ಲಿ ಉಗ್ರರು ನಡೆಸಿದ ಮೂರನೇ ದಾಳಿ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News