ʼಕೋವಿಡ್‌ ಜಾಗೃತಿʼ ಕಾಲರ್‌ ಟ್ಯೂನ್‌ ನಿಲ್ಲಿಸಲು ಸರ್ಕಾರ ಚಿಂತನೆ

Update: 2022-03-27 17:04 GMT

ಹೊಸದಿಲ್ಲಿ: ಕೊರೋನಾ ಸಾಂಕ್ರಾಮಿಕದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಸಾರವಾಗುತ್ತಿರುವ ʼಕೋವಿಡ್‌-ಜಾಗೃತಿʼ ಕಾಲರ್‌ ಟ್ಯೂನ್‌ ಅನ್ನು ಕೈಬಿಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಕರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಇನ್ನೂ ಇದನ್ನು ಪ್ರಸಾರ ಮಾಡಬೇಕಾದ ಅಗತ್ಯ ಇಲ್ಲವೆಂದು, ಹಾಗಾಗಿ ಕೋವಿಡ್‌ ಜಾಗೃತಿ ಕಾಲರ್‌ ಟ್ಯೂನ್‌ ಅನ್ನು ನಿಲ್ಲಿಸುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವೂ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. 

ಈ ಕಾಲರ್‌ ಟ್ಯೂನ್‌ ನಿಮಿತ್ತ ಅಗತ್ಯ ಸಂದರ್ಭಗಳಲ್ಲಿ ಫೋನ್‌ ಕರೆಗಳು ಸ್ವೀಕರಿಸುವವರನ್ನು ತಲುಪಲು ವಿಳಂಬವಾಗುತ್ತಿದ್ದು, ಈ ಕಾರಣದಿಂದ ಕಾಲರ್‌ ಟ್ಯೂನ್‌ ಅನ್ನು ಕೈಬಿಡಬೇಕೆಂದು ಆಗ್ರಹಿಸಿ ದೂರಸಂಪರ್ಕ ಇಲಾಖೆಯು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News