ನಟಿಗೆ ಕಿರುಕುಳ ಪ್ರಕರಣ: ಪ್ರಧಾನ ಆರೋಪಿಗೆ ಜಾಮೀನು ನಿರಾಕರಣೆ
Update: 2022-03-29 22:57 IST
ಕೊಚ್ಚಿ, ಮಾ. 29: ನಟ ದಿಲೀಪ್ ಕೂಡ ಆರೋಪಿಯಾಗಿರುವ 2017ರ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಧಾನ ಆರೋಪಿಗೆ ಜಾಮೀನು ನೀಡಲು ಕೇರಳ ಉಚ್ಚ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ.
ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿರುವ ಪಲ್ಸರ್ ಸುನಿ ಎಂದು ಕರೆಯಲಾಗುವ ಸುನೀಲ್ ಎನ್.ಎಸ್. ಅವರಿಗೆ ಜಾಮೀನು ನೀಡಲು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ನಿರಾಕರಿಸಿದ್ದಾರೆ. ಜಾಮೀನು ನಿರಾಕರಿಸಿದ ನ್ಯಾಯಾಲಯ ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.